ಕರಾವಳಿ ಶ್ರೀರಾಮಸೇನೆ ಮುಖಂಡರ ಸಭೆ, ಚುನಾವಣೆಯ ಪೂರ್ವತಯಾರಿಯೆ?!

Spread the love

ಶ್ರೀರಾಮಸೇನೆಯ ಉಡುಪಿ ಮತ್ತು ದ.ಕ ಜಿಲ್ಲೆಯ ಜಂಟಿ ಸಭೆ ಇಂದು ಮಂಗಳೂರು ವಿಭಾಗ ಅಧ್ಯಕ್ಷರ ಮಣಿಪಾಲ ಮನೆಯಲ್ಲಿ ನಡೆಯಿತು. ಪ್ರಮೋದ್ ಮುತಾಲಿಕ್ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದ ಕೂಡಲೇ ಉಡುಪಿಯಲ್ಲಿ ಉಭಯ ಜಿಲ್ಲೆಯ ಮುಖಂಡರು ಸಭೆ ಸೇರಿರುವುದು ಕೂತೂಹಲ ಮೂಡಿಸುವಂತಿದೆ. ಅದರಲ್ಲೂ ಬಳ್ಳಾರಿಯ ನಾಯಕ ಭಾಗವಹಿಸಿರುವುದು ಶ್ರೀ ರಾಮಸೇನೆ ಪ್ರಮುಖರು ಉಡುಪಿ ಮತ್ತು ದ ಕ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ದಿಸುವುದು ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಂಘಟನೆ, ದತ್ತಮಾಲೆ, ಹಾಗೂ ಇನ್ನಿತರ ವಿಶಯಗಳನ್ನು ಚರ್ಚಿಸಲಾಯಿತು ಎಂದು ಜಿಲ್ಲಾ ಪ್ರಮುಖರು ಮಾಧ್ಯಮಕ್ಕೆ ತಿಳಿಸಿದರೂ ಇದೊಂದು ಚುನಾವಣಾ ಪೂರ್ವಭಾವಿ ಸಭೆ ಎಂಬುದು ನಿಶ್ಚಿತ. ಈ ಸಭೆಯಲ್ಲಿ ಉಭಯ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿರುವುದು ಗಮನಾರ್ಹ.

Right Click Disabled