ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶ್ರೀರಾಮಸೇನೆ ಮುಕ್ತವಾಗಲಿದೆಯೇ?

Spread the love

ಹೌದು ಎನ್ನುತ್ತಾರೆ ಕಟ್ಟರ್ ಹಿಂದುತ್ವವಾದಿಯಾದ ಶ್ರೀರಾಮ ಸೇನೆಯ ಕಾರ್ಯಕರ್ತರು. ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರನ್ನು ವಿಧಾನ ಸೌಧಕ್ಕೆ ಶಾಸಕರಾಗಿ ಕಳುಹಿಸಬೇಕೆಂದು ಅವರ ಶಿಷ್ಯರು ತೀರ್ಮಾನಿಸಿ, ಉಡುಪಿ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ತದನಂತರ ಅವರ ಜಾತಕ ದೋಷದ ಫಲವಾಗಿ ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷ್ಯ ಪ್ರಕಾಶ್ ಅಮ್ಮಣ್ಣಾಯ ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ದಂಡ ತೀರ್ಥದಲ್ಲಿ ಯಾಗ ಮತ್ತು ಹೋಮ ಹಾಗೂ ಅನ್ನಸಂತರ್ಪಣೆಯನ್ನು ಶ್ರೀರಾಮಸೇನೆಯ ಮಂಗಳೂರು ವಿಭಾಗ ಅಧ್ಯಕ್ಷರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಸಹಯೋಗದೊಂದಿಗೆ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ಕಾರ್ಕಳದ ಉದ್ಯಮಿಯೊಬ್ಬ ಇದನ್ನೇ ಬಂಡವಾಳ ಮಾಡಿಕೊಂಡು ಕಳೆದ 5 ದಿವಸದಿಂದ ಪ್ರಮೋದ್ ಮುತಾಲಿಕರವರನ್ನು ಕಾರ್ಕಳದಲ್ಲಿ ಸುತ್ತಾಡಿಸಿರುವುದು ಉಡುಪಿ ಹಾಗೂ ದಕ ಜಿಲ್ಲೆಯ ಶ್ರೀ ರಾಮಸೇನೆಯ ಗಮನಕ್ಕೆ ಬಂದಿದೆ. ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಗಮನಕ್ಕೆ ತಾರದೇ ಈ ರೀತಿಯ ಬೆಳವಣಿಗೆಯಿಂದ ರೊಚ್ಚಿಗೆದ್ದ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಸಂಘಟನೆಯ ಪದಾಧಿಕಾರಿಗಳು ಶ್ರೀ ರಾಮಸೇನೆಯ ರಾಜ್ಯ ನಾಯಕರು ಹಾಗೂ ಕಾರ್ಕಳದ ಉದ್ಯಮಿ ವಿರುದ್ಧ ಗರಂ ಆಗಿದ್ದು, ತಮ್ಮ ತಮ್ಮ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಉಭಯ ಜಿಲ್ಲೆಯ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ತುರ್ತು ಬೈಠಕ್ ನ್ನು ಕರೆದಿರುವುದು ಸಂಘಟಾತ್ಮಕವಾಗಿ ಸಂಶಯ ಮೂಡಿಸಿದೆ. ಹಾಗೂ ಶ್ರೀ ರಾಮಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಬಲಿಪಶು ಮಾಡಿ ತಮ್ಮ ಹಣದ ದಾಸೋಹ ಮೆರೆಯಲಿರುವ ರಾಜ್ಯದ ಕೆಲವು ನಾಯಕರ ಕುತಂತ್ರ ಅರಿತ, ಶ್ರೀರಾಮ್ ಸೇನೆಯ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದು,
ಸಂಭವಾಮಿ ಯುಗೇ ಯುಗೇ ಎಂದು ಹೇಳಿದ ಶ್ರೀ ಕೃಷ್ಣನ ನಾಡಾದ ಉಡುಪಿಯಲ್ಲಿ ಇನ್ನು ಕೆಲವೇ ದಿನದಲ್ಲಿ ಹಿಂದುತ್ವದ ಜೇಂಕಾರ ಮೊಳಗಿಸುತ್ತಾರೆಯೇ? ಎಂಬ ಅನುಮಾನ ಪ್ರಖರ ಹಿಂದೂ ನಿಷ್ಠರಲ್ಲಿ ಸಂಶಯ ಮೂಡಿಸುತಿದೆ.

Right Click Disabled