ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಕಟ್ಟಡ ನಿರ್ಮಾಣ ಮಂಡಳಿ ಸದಸ್ಯೆ ಶಿವಾನಿ ಶಾಂತಾರಾಮ. ಭಟ್ಕಳ ಇವರಿಗೆ ವಾರೆಂಟ್

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ ಸದಸ್ಯೆಯಾಗಿದ್ದ, ಶಿವಾನಿ ಶಾಂತಾರಾಮ.ಭಟ್ಕಳ, ಹೊನ್ನಾವರ ತಾಲೂಕಿನ ಗುತ್ತಿಗೆದಾರನೊಂದಿಗಿನ ಹಣಕಾಸಿನ ವ್ಯವಹಾರಕ್ಕೆ ಸಂಭವಿಸಿದಂತೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿವಾನಿ ಹಾಗೂ ಅವಳ ಪತಿ ಸೇರಿದಂತೆ ಅವರ ಇಬ್ಬರ ವಿರುದ್ದ ಹೊನ್ನಾವರ ಜೆ.ಎಂ.ಎಪ್.ನ್ಯಾಯಾಲಯ ವಾರೆಂಟ್ ಹೊರಡಿಸಿದೆ, ಹೊನ್ನಾವರ ತಾಲೂಕಿನ ಉಪ್ಪೋಣಿಯ ಸಂತೋಷ ಕೇಶವ ನಾಯ್ಕ, ಚಕ್.ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು, ಶಿವಾನಿ‌ ಶಾಂತಾರಾಮ ಅವರ ಪತಿ ಶಾಂತಾರಾಮ. ಭಟ್ಕಳ ಹಿಂದಿನಿಂದಲೂ ರಾಜಕೀಯ ನಂಟಿನಲ್ಲಿ ಗುರುತಿಸಿಕೊಂಡಿದ್ದು,ಇತ್ತಿಚಿನ ದಿನಗಳಲ್ಲಿ ಗುತ್ತಿಗೆದಾರರು ಹಾಗೂ ರಾಜಕಾರಣಿಗಳ ನಂಟಿನ ಕುರಿತು ಚರ್ಚೆಗಳು ವ್ಯಕ್ತವಾಗುತ್ತಿವೆ,ಹಾಗಾಗಿ ಇವರ ಮತ್ತು ಗುತ್ತಿಗೆ ದಾರರ ನಡುವಿನ ಹಣಕಾಸಿನ ವ್ಯವಹಾರ ವಾರೆಂಟ್ ಹೊರಡಿಸುವ ಹಂತಕ್ಕೆ ಬಂದಿರುವುದು ರಾಜಕೀಯ ವ್ಯವಾಹಾರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ಇದರ ಹಿನ್ನಲೆ: ಸಂತೋಷ ಕೇಶವ ನಾಯ್ಕ ಪರ ವಕೀಲರಾದ ಶಿವಾನಿ ಹಾಗೂ ಶಾಂತಾರಾಮ ಭಟ್ಕಳ ಇವರಿಗೆ ಕಳೆದ ವರ್ಷ ಎಂಟು ಲಕ್ಷ ರೂ.ಗಳ ಹಣಕಾಸಿನ ವ್ಯವಹಾರ ನಡೆದಿತ್ತು,ಎಂಟು ಲಕ್ಷ ರೂ.ಗಳನ್ನು ಸಂತೋಷ ಇವರಿಂದ ಕೈಗಡ ಪಡೆದಿದ್ದರು.ಇದಕ್ಕೆ ಗ್ಯಾರಂಟಿಯಾಗಿ ನಾಲ್ಕು ಲಕ್ಷದ ಎರಡೂ ಚಕ್ ಗಳನ್ನು ಕೊಟ್ಟದ್ದು,ಸಂತೋಷ ನಾಯ್ಕ ರವರು ಮರಳಿ ಕೇಳಿದಾಗ ಅವರ ಹಣ ಕೊಡದೆ ಇದ್ದಾಗ ಚಕ್ ನ್ನು ಬ್ಯಾಂಕಿಗೆ ಕಲೆಕ್ಷನ್ ಗೆ ಹಾಕಿದ್ದರು, 8/4/2022 ರಂದು ಬೌನ್ಸ್ ಆಗಿ ಬಂದಿದ್ದು ಕಂಡುಬರುತ್ತದೆ, ನಂತರ ಜೆ.ಎಂ.ಎಪ್.ಸಿ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ದಲ್ಲಿ ವಾರೆಂಟ ದಾಖಲಾಗಿದ್ದು.ಮಾನ್ಯ ವಕೀಲರು ನೋಟಿಸನ್ನು ಜಾರಿಗೊಳಿಸಿದ್ದಾರೆ,

Right Click Disabled