ಗೋಮಾತೆ ಪೂಜೆಗೆ ಸರಕಾರದ ಆದೇಶ ಶ್ರೀರಾಮಸೇನೆಯಿಂದ ಸ್ವಾಗತ
ಪ್ರಕೃತಿ ಹಾಗೂ ಗೋವು ಆರಾಧನೆ ಪ್ರತೀಕವಾದ ದೀಪಾವಳಿ ಹಬ್ಬದಂದು ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನಗಳಲ್ಲಿ ಗೋ ಪೂಜೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿರುದನ್ನು ಉಡುಪಿ ಜಿಲ್ಲಾ ಶ್ರೀರಾಮಸೇನೆ ಸ್ವಾಗತಿಸುತ್ತದೆ.
ನಾವು ಪೂಜಿಸುವ ಗೋವುಗಳನ್ನು ಅಮಾನುಷವಾಗಿ ಕಡಿದುಕೊಲ್ಲುವ, ಮತಾಂದರು ಹಾಗೂ ಗೋವು ಕಟುಕರ ಹಾವಳಿಯಿಂದ ಎಚ್ಚೆತ್ತುಕೊಂಡಿರುವ ಹಿಂದೂ ಸಮಾಜಕ್ಕೆ ಸಂತಸವಾಗಿದೆ. ಅದೇ ರೀತಿ ಶ್ರೀರಾಮಸೇನೆ ಕರ್ನಾಟಕ ವತಿಯಿಂದ ದೀಪಗಳ ಹಬ್ಬ ದೀಪಾವಳಿಯಂದು ಹಲಾಲ್ ಮುಕ್ತ ದೀಪಾವಳಿಯನ್ನು ಆಚರಿಸಿ ಎಂದು ಕರೆ ಕೊಟ್ಟಿರುವುದು ಇಲ್ಲಿ ಉಲ್ಲೇಖನೀಯ. ಹಿಂದೂ ಸಮಾಜ ಯಾವತ್ತೂ ಹಿಂದುಗಳ ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸಬೇಕು, ಇದರಲ್ಲಿ ಯಾರದೇ ಹಸ್ತಕ್ಷೇಪ ಇರಬಾರದು ಎಂಬುದು ನಮ್ಮ ನಿಲುವಾಗಿದೆ. ಹಾಗಾಗಿ ದೀಪಾವಳಿಯಂದು ಎಲ್ಲ ದೇವಸ್ಥಾನಗಳಲ್ಲಿ ಗೋ ಪೂಜೆಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿರುವ ಸರಕಾರಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿರುತ್ತಾರೆ.