ಶ್ರೀ ಕ್ಷೇತ್ರ ಕಾಪು ದಂಡ ತೀರ್ಥ ಮಠದಲ್ಲಿ ಹೋಮ ಹಾಗೂ ಪೂಜಾ ಕಾರ್ಯಕ್ರಮ

Spread the love

ಆತ್ಮೀಯರೇ,
ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರು, ಎಲ್ಲಾ ಹಿಂದೂ ಸಂಘಟನೆಗಳಿಂದ ಹಿಂದೂ ಹೃದಯ ಸಾಮ್ರಾಟ್ ಎಂದು ಕರೆಯಲ್ಪಡುವ, ಪ್ರಖರ ಹಿಂದುತ್ವವಾದಿ ಶ್ರೀ ಪ್ರಮೋದ್ ಮುತಾಲಿಕ್ ರವರ ಅಯುರಾರೋಗ್ಯ ಐಶ್ವರ್ಯ ಮತ್ತು ಹಿಂದೂ ಸಮಾಜವನ್ನು ಜಾಗೃತಿ ಮೂಡಿಸುವ ಹಾಗೂ ಒಗ್ಗೂಡಿಸುವ ಮಹಾ ಯಜ್ನಕ್ಕೆ ಶಕ್ತಿ ತುಂಬಲು ಅವರ ಶಿಷ್ಯ ವೃಂದ ಮತ್ತು ಅಭಿಮಾನಿಗಳಿಂದ ಶ್ರೀ ಕೃಷ್ಣ ಮುಖ್ಯ ಪ್ರಾಣರ ಪ್ರೀತ್ಯರ್ಥ ಶ್ರೀ ಮದ್ವಾಚಾರ್ಯ ಕರಾರ್ಚಿತ ಶ್ರೀ ಕ್ಷೇತ್ರ ಕಾಪು ದಂಡ ತೀರ್ಥ ಮಠದಲ್ಲಿ ಪ್ರಖ್ಯಾತ ಜ್ಯೋತಿಷಿ ಶ್ರೀ ಪ್ರಕಾಶ್ ಅಮ್ಮಣ್ಣಾಯ ರವರ ನೇತ್ರತ್ವದಲ್ಲಿ ಹೋಮ ಹಾಗೂ ಪೂಜಾ ಕೈಂಕರ್ಯ ವನ್ನು ದಿನಾಂಕ 03.10.2022 ರ ಸೋಮವಾರದಂದು ಬೆಳಿಗ್ಗೆ 09.30ಕ್ಕೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮದ್ಯಾಹ್ನ 12 ಗಂಟೆಗೆ ಪೂರ್ಣಹುತಿ ನಂತರದ ಶ್ರೀ ದೇವರ ಪ್ರಸಾದ ಹಾಗೂ ಭೋಜನ ಕೂಟಕ್ಕೆ ಪ್ರಮೋದ್ ಮುತಾಲಿಕ್ ಅವರ ಅಭಿಮಾನಿ ಶಿಷ್ಯರಾದ ತಾವು ಆಗಮಿಸಿ ಈ ಪುಣ್ಯ ಕಾರ್ಯದಲ್ಲಿ ತಮ್ಮ ಉಪಸ್ಥಿತಿಯನ್ನು ಬಯಸುವ:


ಪ್ರಮೋದ್ ಮುತಾಲಿಕ್ ಅವರ ಅಭಿಮಾನಿಗಳು ಮತ್ತು
ಶ್ರೀ ರಾಮಸೇನೆ ಉಡುಪಿ ಜಿಲ್ಲೆ.

ಡಾ. ವಿಜಯೇಂದ್ರ ವಸಂತ
ಗೌರವಾಧ್ಯಕ್ಷರು
ಶ್ರೀ ರಾಮಸೇನೆ ಉಡುಪಿ ಜಿಲ್ಲೆ.

ಮೋಹನ್ ಭಟ್ ವಿಭಾಗಧ್ಯಕ್ಷರು
ಶ್ರೀ ರಾಮಸೇನೆ ಮಂಗಳೂರು ಉಡುಪಿ ವಿಭಾಗ

ಜಯರಾಂ ಅಂಬೆಕಲ್ಲು
ಜಿಲ್ಲಾಧ್ಯಕ್ಷರು
ಶ್ರೀ ರಾಮಸೇನೆ ಉಡುಪಿ

Right Click Disabled