ಹರ್ ಘರ್ ತಿರಂಗಾ” ಪ್ರತಿ ಮನೆ, ಮನದಲ್ಲಿ ರಾಷ್ಟ್ರೀಯ ಹಬ್ಬವಾಗಿದೆ – ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೈಲೇಂದ್ರಕುಮಾರ್

“
ಬೆಂಗಳೂರು: “ಹರ್ ಘರ್ ತಿರಂಗಾ” ಪ್ರತಿ ಮನೆ, ಮನದಲ್ಲಿ ರಾಷ್ಟ್ರೀಯ ಹಬ್ಬವಾಗಿದೆ ಎಂದು
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೈಲೇಂದ್ರಕುಮಾರ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಂಬೇಗೌಡನಗರ ವಾರ್ಡ್ ಬಿಜೆಪಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ “ಹರ್ ಘರ್ ತಿರಂಗಾ” ಅಂದೋಲನ ಮತ್ತು ತ್ರಿವರ್ಣ ಧ್ವಜದ ಇತಿಹಾಸದ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ “ಹರ್ ಘರ್ ತಿರಂಗಾ” ಬಹಳ ಯಶ್ವಸಿಯಾಗಿ ಸಾಗುತ್ತಿದೆ. ದೇಶ, ನಾಡು, ನುಡಿಯ ಬಗ್ಗೆ ಎಲ್ಲರೂ ಅಭಿಮಾನ ಬೆಳಸಿಕೊಳ್ಳಿ. ಸಮೃದ್ದ, ಸದೃಢ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.
ಗರುಡಾ ಫೌಂಡೇಷನ್ ಸಂಸ್ಥಾಪಕರಾದ
ಶ್ರೀಮತಿ ಮೇದಿನಿ ಗರುಡಾಚಾರ್ ಮಾತನಾಡಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡನಗರ ವಾರ್ಡ್ ನಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅಂದೋಲನದ ಪ್ರಯುಕ್ತ ಪ್ರತಿ ಮನೆಗಳಿಗೆ ತ್ರಿವರ್ಣ ಧ್ವಜ ವಿತರಿಸಲಾಗುತ್ತಿದೆ. 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ದೇಶದ ನಾಗರಿಕರು ಪಾಲ್ಗೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ
ಶ್ರೀಮತಿ ಭಾಗ್ಯವತಿ ಅಮರೇಶ್ ರವರು ಮಾತನಾಡಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಶಾಸಕರಾದ ಉದಯಗರುಡಾಚಾರ್ ರವರ ನೇತೃತ್ವದಲ್ಲಿ ಹೊಂಬೇಗೌಡನಗರ ವಾರ್ಡ್ ನಲ್ಲಿ ಮನೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಉಚಿತವಾಗಿ ವಿತರಿಸಲಾಗುತ್ತಿದೆ. ತ್ರಿವರ್ಣ ಧ್ವಜದ ಇತಿಹಾಸವಿರುವ ಕಿರುಹೊತ್ತಿಗೆ ಪುಸ್ತಕವನ್ನು ಪ್ರತಿ ಮನೆಗಳಿಗೆ ತಲುಪಿಸಲಾಗುತ್ತಿದೆ.
ಇಂದಿನ ಯುವ ಸಮೂಹಕ್ಕೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಯಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮೂಹ ಸಾಗಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಾರ್ಡ್ ಬಿಜೆಪಿ ಅಧ್ಯಕ್ಷ ಅಜಿತ್, ಚಿತ್ರ ನಿರ್ಮಾಪಕ ಜಾಕ್ ಮಂಜು, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್ (ಅಂಬರೀಶ್)ರವರು ಭಾಗವಹಿಸಿದ್ದರು.
