ABVP ಕರ‍್ಯರ‍್ತರ ವಿರುದ್ಧ FIR ದಾಖಲು

Spread the love


ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣ ಖಂಡಿಸಿ ಹಾಗೂ ಎಸ್ ಡಿಪಿಐ, ಪಿಎಫ್ ಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ೩೦ ಎಬಿವಿಪಿ ಕರ‍್ಯರ‍್ತರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವರ ರ‍್ಕಾರಿ ನಿವಾಸದ ಬಳಿ ಇಂದು ಬೆಳಿಗ್ಗೆ ಎಬಿವಿಪಿ ಕರ‍್ಯರ‍್ತರು ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪರ‍್ಣವಾಗಿ ಕುಸಿದಿದ್ದು, ಜನರು ಜೀವ ಭಯದಲ್ಲಿ ಬದುಕುವಂತಾಗಿದೆ. ಕೊಲೆ ಆರೋಪಿಗಳ ವಿರುದ್ಧ ರ‍್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದೇ ವೇಳೆ ಪ್ರತಿಭಟನಾ ನಿರತ ಎಬಿವಿಪಿ ಕರ‍್ಯರ‍್ತರು ಏಕಾಏಕಿ ಗೃಹ ಸಚಿವರ ನಿವಾಸದ ಗೇಟ್ ತಳ್ಳಿ ಒಳನುಗ್ಗಿದ್ದರಲ್ಲದೇ, ರ‍್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು.
ತಕ್ಷಣ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ಮಹಿಳಾ ಕರ‍್ಯರ‍್ತರು ಸೇರಿ ೪೦ ಎಬಿವಿಪಿ ಕರ‍್ಯರ‍್ತರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜೆ.ಸಿ.ನಗರ ಠಾಣೆಯಲ್ಲಿ ರ‍್ವ ಮಹಿಳಾ ಎಬಿವಿಪಿ ಕರ‍್ಯರ‍್ತೆ ಸೇರಿದಂತೆ ೩೦ ಎಬಿವಿಪಿ ಕರ‍್ಯರ‍್ತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಐಪಿಸಿ ಸೆಕ್ಷನ್ ೪೪೮, ೧೪೩, ೧೪೭, ೧೪೯ ಹಾಗೂ ಕಲಂ ೩ ಆಫ್ ಪಿಡಿಪಿಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ABVP ಕರ‍್ಯರ‍್ತರು ಅರೆಸ್ಟ್

Right Click Disabled