ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಗುಡ್ಡ ಕುಸಿತ ರಸ್ತೆ ಸಂಚಾರ ನಿಷೇದ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಗುಡ್ಡ ಕುಸಿತದ ಕಾರಣ ರಸ್ತೆ ಕುಸಿದಿರುವುದರಿಂದ ಸುತಕ್ಷತಾ ಕ್ರಮವಾಗಿ ರಾಷ್ಟ್ರೀಯ. ಹೆದ್ದಾರಿ ಯಲ್ಲಿ ಹೊನ್ನಾವರ ತಾಲ್ಲೂಕಿನ ಗೇರಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಗ್ರಾಮದವರಿಗೆ ರಸ್ತೆ ಸಂಚಾರ ನಿಷೇಧಿಸಲಾಗಿದೆ, ಹೊನ್ನಾವರ ದಿಂದ ಸಿದ್ದಾಪುರ, ಜೋಗಜಲಪಾತ,ಸಾಗರಕಡೆಗೆ ಹೋಗುವ ವಾಹನಗಳು ಈ ಕೆಳಕಂಡ ಮಾರ್ಗವಾಗಿ ಹೋಗಲು ತಿಳಿಸಲಾಗಿದೆ, ಹೊನ್ನಾವರ- ಕುಮಟಾದಿಂದ ಸಂತೆಗುಳಿ ಮಾರ್ಗವಾಗಿ ಸಿದ್ದಾಪುರ ರಸ್ತೆ ಮಾರ್ಗವಾಗಿ ಹೋಗುವುದು.ಸೂಚನೆ ನೀಡಲಾಗಿದೆ.
