ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್

ಬೆಂಗಳೂರು; ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ.
Psi ಅಕ್ರಮಕ್ಕೆ ಸಂಬಂಧಿಸಿ ಇವರ ವಿರುದ್ಧ ಸಾಕ್ಷ್ಯಾರಾದಗಳು ಲಭ್ಯವಾಗಿದ್ದರಿಂದ ಬಂಧಿಸಲಾಗಿದೆ. ಇವರು ತಮ್ಮ ಕಚೇರಿಯಲ್ಲಿಯೇ ಓಎಂಆರ್ ಗಳನ್ನು ತಿದ್ದುಪಡಿ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಸಿಐಡಿ ಪೊಲೀಸರಿಂದ ಕಚೇರಿಯಲ್ಲಿಯೇ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ.
ಇದೀಗ ಬಂಧಿತ ಡಿಜಿಪಿಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ತನಿಖೆಯ ನಂತರ ಮತ್ತಷ್ಟು ಅಕ್ರಮ ಹೊರಬರುವ ಸಾಧ್ಯತೆ ಇದೆ.