ಕಲೆಯೇ ಕಲಾವಿದನ ಉಸಿರು ಎಂದು ಜೀವಿಸುತ್ತಿರುವ ಪತ್ರಕರ್ತ ,ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಪ್ರತಿಭಾನ್ವಿತ ಕಲಾವಿದ

Spread the love

ಹೆಸರಿಗೆ ತಕ್ಕಂತೆ ಸಂತೋಷ್ ಆರಾಧ್ಯ ಮಹಾರಾಜ್ ಮಹಾರಾಜನಂತೆ ಚಾಕಚಕ್ಯತೆ ಉಳ್ಳವರು. ಸುಮಾರು ಐವತ್ತಕ್ಕೂ ಚಲನ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ಸಂತೋಷ್ ಮಹಾರಾಜ್ ಉದಯೋನ್ಮುಖ ಕಲಾವಿದರಾಗಿ ಕನ್ನಡ ಚಲನ ಚಿತ್ರರಂಗದಲ್ಲಿ ಹೊರಹೊಮ್ನುತ್ತಿದ್ದಾರೆ. ಸಂತೋಷ್ ಮಹಾರಾಜ ಅವರು 7 ನವೆಂಬರ್ 1989 ರಲ್ಲಿ ಕಲ್ಪತರು ನಾಡು ಎಂದೇ ಪ್ರಸಿದ್ಧಿಯಾಗಿರುವ ತುಮಕೂರಿನಲ್ಲಿ ಜನಿಸಿದರು. ಸಂತೋಷ್ ಅವರಿಗೆ ಸಾಹಿತ್ಯ, ಸಂಸ್ಕೃತಿ, ಕವನ, ಕಥೆ, ಕಾದಂಬರಿ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ಚಿಕ್ಕವಯಸ್ಸಿನಿಂದಲೇ ಬಹಳ ಆಸಕ್ತಿ, ಶಾಲೆಯಲ್ಲಿ ಅವರ ಪ್ರತಿಭೆಗಳಿಗೆ ಎಣಿಸಲಾರದಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದಷ್ಟೇ ಅಲ್ಲದೆ ನಟನೆ, ಈಜುವುದು, ಚಿತ್ರಕಲೆ, ವಿವಿಧ ಭಾಷೆಗಳನ್ನು ಕಲಿಯುವುದು ಮುಂತಾದ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ. ಸಂತೋಷ್ ರವರು “ನಟನೆಗೂ ಸೈ. ಸಮಾಜ ಸೇವೆಗೂ ಸೈ”.
ಎಲ್ಲರಿಗೂ ಒಬ್ಬ ಮಾರ್ಗದರ್ಶಿ ಇರುವಂತೆ ಇವರಿಗೂ ಇದ್ದಾರೆ ನಮ್ಮ ವರ ನಟ ಡಾಕ್ಟರ್ ರಾಜಕುಮಾರ್ ಅವರ ನಟನೆ. ಸಂತೋಷ್ ಅವರ ಹದಿಹರೆಯದ ಮನಸ್ಸಿನಲ್ಲಿ ನಟನೆಯ ಬೀಜ ಬಿತ್ತಂತಾಯಿತು, ಅಂದು ಇವರು ಡಾಕ್ಟರ್ ರಾಜಕುಮಾರ್ ಅವರಿಂದ ಪ್ರೇರೇಪಿತರಾಗಿ ಚಿತ್ರರಂಗಕ್ಕೆ ಪ್ರವೇಶಿಸಿ ಸುಮಾರು 40 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಸದಾ ಉತ್ಸಾಹದಿಂದ, ಹೆಮ್ಮೆಯ ಪ್ರಜೆಯಾಗಿ, ಜವಾಬ್ದಾರಿಯುತ ವ್ಯಕ್ತಿಯಾಗಿ ಸಮಾಜಸೇವೆಯಲ್ಲಿ ತೊಡಗಿರುತ್ತಾರೆ, ಕೃಷಿ ಮತ್ತು ರೈತರಿಗೆ ಸಹಾಯ ಮಾಡಿದ್ದಾರೆ, ದಲಿತ ಮತ್ತು ಹಿಂದುಳಿದವರಿಗೆ ನ್ಯಾಯ ದೊರಕಿಸಲು ಹೋರಾಡುತ್ತಿದ್ದಾರೆ, ಅದರೊಡನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರವಾಗಿ ಧ್ವನಿ ಏತ್ತುತ್ತ ಬರುತ್ತಿದ್ದಾರೆ. ಜನರ ಒಳಿತಿಗಾಗಿ ಹೋರಾಡುವ ನಮ್ಮ ಸಂತೋಷ್ ಅವರನ್ನು ನಾವು “ಯುವ ಐಕಾನ್”ಎಂದೇ ಕರೆಯಬಹುದು. ಸಂತೋಷ್ ಅವರು ಬಹುಮುಖ ನಟನಾಗಿ ವಿವಿಧ ರೀತಿಯ ಚಿತ್ರಗಳಲ್ಲಿ ಖ್ಯಾತ ನಟರಾದ ಡಾಕ್ಟರ್ ಶಿವರಾಜಕುಮಾರ್, ಸೂಪರ್ ಸ್ಟಾರ್ ಉಪೇಂದ್ರ,ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್ ರೊಡನೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಚಿತ್ರಗಳ ಹೆಸರುಗಳು ಹೀಗಿದೆ ಮಾಸ್ ಲೀಡರ್, ರುಸ್ತುಂ,ಟಗರು,ಬುದ್ಧಿವಂತ-2, ಗಾಂಧಿಗಿರಿ ,ಚಿಗರಿ ದೋಸ್ತ್ ಅಮರ್ ,ಬ್ರಹ್ಮಚಾರಿ, ಅಧ್ಯಕ್ಷ ಇನ್ ಅಮೆರಿಕ,ಭರಾಟೆ, ಮಾಸ್ಟರ್ ಪೀಸ್, ಒಡೆಯ, ರಾಬರ್ಟ್,ಮದಗಜ,ಮಾಸ್ಟರ್, ಫಸ್ಟ್ ರಾಂಕ್ ರಾಜು ,ರಾಜು ಜೇಮ್ಸ್ಬಾಂಡ್ ,ಪಾಪ್ ಕಾನ್ ಮಂಕಿ ಟೈಗರ್,ಆಕ್ಟ್ 1978,ಬಹದ್ದೂರ್, ಪೊಗರು, ಮಾರ್ಟಿನ್ ,ಕೋಟಿಗೊಬ್ಬ-3 ಇನ್ನು ಹೆಚ್ಚು ಮುಂತಾದ ಚಿತ್ರಗಳಲ್ಲಿ ಪೊಲೀಸ್ ,ರಾಜಕೀಯ ನಾಯಕ,ಡ್ಯಾನ್ಸರ್ ,ಫೈಟರ್ ಬೌನ್ಸರ್ ,ಬಾಡಿಗಾರ್ಡ್,ನಾಯಕನ ಸ್ನೇಹಿತ, ಖಳನಾಯಕನಾಗಿ, ಅಭಿನಯಿಸಿದ್ದಾರೆ. ನಟನೆಯನ್ನು ಹೊರತುಪಡಿಸಿ ಸಂತೋಷ ರವರ ಪತ್ರಕರ್ತನಾಗಿ ಜನರ ಅಂತರಾಳವನ್ನು ಅರಿತು ಅವರ ಕಷ್ಟಗಳಿಗೆ ಮಿಡಿಯುತ್ತಾರೆ. ಹೀಗೆ ಸದಾ ಸಂತೋಷದಿಂದ ಮುಗ್ಧ ಮನಸ್ಸಿನಿಂದ ಜನರನ್ನು ನೋಡಿಕೊಂಡು ಅವರ ಸೇವೆಯನ್ನು ಮಾಡುತ್ತಾ ಪ್ರೀತಿಯಿಂದ ಜನಗಳ ಮನಸ್ಸನ್ನು ಗೆದ್ದಿರುವ ನಮ್ಮೆಲ್ಲರ ಹೆಮ್ಮೆಯ ಮನೆಯ ಮಗನಾಗಿರುವ ಸಂತೋಷ್ ಅರಾಧ್ಯ ಮಹಾರಾಜರವರು ಮುಂಬರುವ ಚಿತ್ರಗಳಲ್ಲಿ ಅತ್ಯುತ್ತಮ ನಾಯಕನಟನಾಗಿ ಅಭಿನಯಿಸುವ ಮೂಲಕ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗೆಲುವಿನ ಗರಿಯು ಸೇರಬೇಕೆಂದು ನಮ್ಮೆಲ್ಲರ ಆಶಯವಾಗಿದೆ.

Right Click Disabled