“ವೇಷ” ಸಿನಿಮಾದ ಟೀಸರ್ ಬಿಡುಗಡೆ

ಹಂಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ, ಕೃಷ್ಣ ನಾಡ್ಪಾಲ್ ನಿರ್ದೇಶನದ, ರಾಘವೇಂದ್ರ ಡಿ.ಜಿ. ನಿರ್ಮಾಣ ಮಾಡಿ ನಾಯಕನಟರಾಗಿ ನಟಿಸಿರುವ, ನಿಧಿ ಮರೋಳಿ, ಸೌಖ್ಯಾ ಗೌಡ, ಮಂಜು ಪಾವಗಡ, ವಾಣಿಶ್ರೀ, ಪ್ರಿಯಾಂಕಾ ಕಾಮತ್ ಹಾಗೂ ಜಯ್ ಶೆಟ್ಟಿ ಖಳನಾಯಕನಾಗಿ ಅಭಿನಯಿಸಿರುವಂತಹ “ವೇಷ” ಸಿನಿಮಾದ ಟೀಸರ್ ಗೆ ಇಂದು ಬೆಳಗ್ಗೆ ಕನ್ನಡ ಚಿತ್ರರಂಗದ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಛಾಯಾಗ್ರಾಹಕ ಸುರೇಂದ್ರ ಪಣಿಯೂರ್, ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿರುವ ಹಾಗೂ ಉತ್ತಮ್ ಸಾರಂಗ್ ಸಂಗೀತ ನಿರ್ದೇಶನದ “ವೇಷ” ಸಿನಿಮಾದ ಟೀಸರ್ ಇಂದು ಸಂಜೆ 6.39ಕ್ಕೆ A2 ಮ್ಯೂಸಿಕ್ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

