ರೈಲಿನಲ್ಲಿ ಟಿಕೇಟ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ 2ಕೋಟಿ ಹಣ ಪೋಲಿಸರ ವಶಕ್ಕೆ

Spread the love

ಟಿಕೇಟ್ ಇಲ್ಲದೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯ ಬಳಿ ಇತ್ತು 2 ಕೋಟಿ ಹಣ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬಯಿ ನಿಂದ ಮಂಗಳೂರಿಗೆ ದಾಖಲೆ ರಹಿತ ಎರಡು ಕೋಟಿ ಹಣವನ್ನು ‌ಕಾರವಾರದ ರೈಲಿನಲ್ಲಿ‌ ಸಾಗುಸುತ್ತಿದ್ದ ವೇಳೆ ಕಾರವಾರದ ಪೋಲಿಸರು ವಶಪಡೆದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,
ಆರೋಪಿತ ರಾಜಸ್ಥಾನ ಮೂಲದ ಮನೋಹರ್.ಸಿಂಗ್.ಅಲಿಯಾಸ್ ಚೇನ್ ಸಿಂಗ್,ಮಂಗಳೂರು ಎಕ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ಮನೋಹರ್ ಸಿಂಗ್ ಕಾರವಾರದ ಬಳಿ ರೈಲ್ವೆ ಪೋಲಿಸರು ದಂಡ ವಿಧಿಸಿದ್ದರು ಆ ವೇಳೆ ಅನುಮಾನಗೊಂಡ ರೈಲ್ವೆ ಪೋಲಿಸರು ಈತನ ಬಳಿ ಇದ್ದ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದಾಗ ಈತನ ಬಳಿ ಇದ್ದ ಬ್ಯಾಗಿನಲ್ಲಿ 100 ಕಟ್ಟಿನ ಎರಡು ಕೋಟಿ ರೂಪಾಯಿ ಪತ್ತೆಯಾಗಿದ್ದು.
ಮುಂಬಯಿ ನ ಭರತ್ ಬಾಯ್ ಅಲಿಯಾಸ್ ಪಿಂಟೋ ಎಂಬುವರ ಬಳಿ ಮನೋಹರ್ ಸಿಂಗ್ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ,ತನ್ನ ಮಾಲೀಕನಿಂದ ಬ್ಯಾಗ್ ಪಡೆದು ಮಂಗಳೂರಿನಲ್ಲಿದ್ದ ರಾಜು ಎಂಬುವನಿಗೆ ಕೊಡಲು ಮುಂಬಯಿ ನಿಂದ ಮಂಗಳೂರಿಗೆ ಹೊರಟ್ಟಿದ್ದಾಗಿ ಪೋಲಿಸರ ತನಿಖೆ ಯಿಂದ ತಿಳಿದು ಬಂದಿದೆ,ಕಾರವಾರ ರೈಲ್ವೆ ಪೋಲಿಸರು ಕಾರವಾರದ ಗ್ರಾಮಾಂತರ ಠಾಣೆ ಪೋಲಿಸ್ ವಶಕ್ಕೆ ನೀಡಿದ್ದು.ಈ ಪ್ರಕರಣದ ತನಿಖೆಯನ್ನು ಕಾರವಾರ ಗ್ರಾಮಾಂತರ ಪೋಲಿಸ್ ಠಾಣೆಯ ಸಿ.ಪಿ.ಐ ಸಿತಾರಾಮ ,ರವರು ಕೈಗೊಂಡಿದ್ದಾರೆ. ಜಿಲ್ಲಾ ವರಷ್ಠಾಧಿಕಾರಿ ಡಾ: ಸುಮನಾ ಡಿ.ಪನ್ನೇಕರ್,ರವರು ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.

Right Click Disabled