ಹರಳಯ್ಯ ನಾಟಕ ಪ್ರದರ್ಶನ: ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಚಲನಚಿತ್ರದ ಚಿತ್ರೀಕರಣ ಉದ್ಘಾಟನೆ

Spread the love

ಸಿಂದಿಗೇರಿ: ನ.22: ನಿನ್ನೆ ಸಂಜೆ ನಡೆದ ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮದಲ್ಲಿ ದಾತ್ರಿ ರಂಗಸಂಸ್ಥೆ ಸಿರಿಗೇರಿ ವತಿಯಿಂದ ಆಯೋಜಿಸಿದ್ದ ಕಲಾ ತಂಡದಿಂದ ಶರಣ ಹರಳಯ್ಯ ಜೀವನ ಆಧಾರಿತ ನಾಟಕ ಪ್ರದರ್ಶನ, ಸಿಂದಿಗೇರಿ ಗ್ರಾಮದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನದೊಂದಿಗೆ ಶ್ರೀ ಶಿವಶರಣ ಮಲ್ಲಪ್ಪತಾತನವರ ಚಲನಚಿತ್ರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಸಿಂದಿಗೇರಿ ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಜೀವನದಲ್ಲಿ ಅಚ್ಚಳಿಯದ ಗುರುತು ಬರೆದಿದ್ದ, ಗುಳ್ಯo ಶ್ರೀ ಶಿವಶರಣ ಗಾದಿಲಿಂಗಪ್ಪ ತಾತ ನವರ ಪರಮ ಶಿಷ್ಯರಾದ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಮಹಿಮೆಯನ್ನು ಚಿತ್ರಿಸುವ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಚರಿತ್ರೆ ಸಿಂದಿಗೇರಿ, ಬೈಲೂರು ಎಂಬ ಚಲನಚಿತ್ರದ ಚಿತ್ರಿಕರಣ ಉದ್ಘಾಟನಾ ಕಾರ್ಯಕ್ರಮದ ವೇಳೆ ಸಿಂದಿಗೇರಿ, ಬೈಲೂರು ಗ್ರಾಮಸ್ಥರು ಹಾಗೂ ಸರ್ವ ಭಕ್ತ ವೃಂದ ಸಹಾಯ, ಸಹಕಾರದಿಂದ ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಭಕ್ತರು, ಸ್ಥಳೀಯ ಗಣ್ಯರು ಭಾಗವಹಿಸಿದರು.

ಹಾಗೆಯೇ ಪೂಜಾ ವಿಧಿ, ದೀಪಪ್ರಜ್ವಲನ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ನಂತರ ಚಿತ್ರ ತಂಡದವರು ಚಿತ್ರದ ಉದ್ದೇಶ ಹಾಗೂ ಕಥಾವಸ್ತು ಕುರಿತು ಮಾಹಿತಿ ನೀಡಿದರು. ಸಿಂದಿಗೇರಿ ಗ್ರಾಮಸ್ಥರು ತಾತನವರ ಸೇವಾ ಚರಿತ್ರೆ, ಸಾಮಾಜಿಕ ಬೋಧನೆಗಳು ಹಾಗೂ ಆತ್ಮಶುದ್ದಿ ಮಾರ್ಗದ ಕುರಿತು ಸಿನಿಮಾ ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಚಿತ್ರದ ಸಹಾಯಕ ನಿರ್ದೇಶಕ ಚನ್ನಪ್ಪತಾತ, ಚಿತ್ರಕಥೆ ನಿರ್ದೇಶನ ರಾಜೇಶ್ ಚಾಗನೂರು, ದಾತ್ರಿ ರಂಗಸಂಸ್ಥೆ ಸಿರಿಗೇರಿ ಕಲಾವಿದರು ಮತ್ತು ಸಿಂದಿಗೇರಿ, ಬೈಲೂರಿನ ಭಕ್ತರು, ಮತ್ತಿತರರು ಇದ್ದರು.

Right Click Disabled