ಸಂಖ್ಯಾಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ:
ಉಡುಪಿ: ಎಂಜಿಎಂ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ‘ಅನ್‌ವೇಲಿಂಗ್ ಸ್ಟಾಟಿಸ್ಟಿಕ್ಸ್ ಥ್ರೂ ಆರ್’ ಎಂಬ ವಿಚಾರದ ಕುರಿತು ಉಪನ್ಯಾಸ ನಡೆಯಿತು. ಡಾ. ಸುಹಾಸ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ಎಮ್ ವಿಶ್ವನಾಥ ಪೈ, ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ ಎಚ್ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಶರಣ್ಯ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಸ್ವಪ್ನ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಪ್ರೊ. ನವೀನ ಹೊಳ್ಳ ಉಪಸ್ಥಿತರಿದ್ದರು.

