ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

Spread the love


ನವರಾತ್ರಿ ಉತ್ಸವ: ಸಾಂಸ್ಕೃತಿಕ ವೈಭವಕ್ಕೆ ಚಾಲನೆ
ಉಡುಪಿ, ಸೆ. 23: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ವೈಭವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾತನಾಡಿ, ನಾಟ್ಯ-ಗಾನ ಪ್ರಿಯೆಯಾದ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಯುವ ಕಲಾವಿದರು ತಮ್ಮ ಕಲಾ ಯಶಸ್ಸಿನ ಮೆಟ್ಟಿಲನ್ನು ಏರಿರುವುದು ಉಲ್ಲೇಖನೀಯ. ಇಲ್ಲಿ ಕಲಾವಿದರಿಂದ ಸಮರ್ಪಿಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತೆ ಸಂತುಷ್ಟಳಾಗುವುದು ಅಷ್ಟೇ ಸತ್ಯ. ನವರಾತ್ರಿ ಪರ್ವಕಾಲದಲ್ಲಿ ಸೇವೆ ನೀಡುವ ಎಲ್ಲ ಕಲಾವಿದರ ಕಲಾ ಬಾಳ್ವೆಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.
ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಸಹ ಮುಖ್ಯಶಿಕ್ಷಕಿ ಚಂದ್ರಕಲಾ ಶರ್ಮ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಉದ್ಯಮಿ ಆನಂದ ಬಾಯರಿ, ಶಾರದಾ ಗೋವಿಂದ ಭಟ್ ಕಿಲ್ಪಾಡಿ, ಕಾಷ್ಠಶಿಲ್ಪಿ ಜಗದೀಶ ಆಚಾರ್ಯ, ಗುರುಪ್ರೀತ್ ಕೌರ್ ಮುಂಬಯಿ, ಶಯನಾಝ್ ಉಪಸ್ಥಿತರಿದ್ದರು.

Right Click Disabled