ಕೆಎಂಸಿ ಮಣಿಪಾಲದಲ್ಲಿಅತ್ಯಾಧುನಿಕ ಪ್ರಮಾಣೀಕೃತ ಎಲ್ ಸಿ/ ಎಂಎಸ್ /ಎಂಎಸ್ ರೋಗನಿರ್ಣಯ ವೇದಿಕೆಯೊಂದಿಗೆ ಕೋರ್ ಮೆಟಾಬಾಲಿಕ್ ಲ್ಯಾಬ್ ಉದ್ಘಾಟನೆ

ಭಾರತದಲ್ಲಿ ಉನ್ನತ-ಮಟ್ಟದ ರೋಗನಿರ್ಣಯವನ್ನು ನೀಡುವ ಕೇವಲ ಆರರಿಂದ ಏಳು ಪ್ರಯೋಗಾಲಯಗಳ ಆಯ್ದ ಗುಂಪಿನಲ್ಲಿ ಮಣಿಪಾಲವು ಸ್ಥಾನ ಪಡೆದಿದೆ
ಮಣಿಪಾಲ, 15 ಸೆಪ್ಟೆಂಬರ್ 2025: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಇನ್‌ವಿಟ್ರೊ ರೋಗನಿರ್ಣಯಕ್ಕಾಗಿ ಸಂಪೂರ್ಣ ಪ್ರಮಾಣೀಕೃತ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಟ್ಯಾಂಡೆಮ್ ಮಾಸ್ ಸ್ಪೆಕ್ಟ್ರೋಮೆಟ್ರಿ (ಟ್ರಿಪಲ್ ಕ್ವಾಡ್ರುಪೋಲ್) ವೇದಿಕೆಯನ್ನು ಹೊಂದಿರುವ ಅತ್ಯಾಧುನಿಕ ಸೌಲಭ್ಯವಾದ ಕೋರ್ ಮೆಟಾಬಾಲಿಕ್ ಲ್ಯಾಬ್ ಅನ್ನು ಉದ್ಘಾಟಿಸಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಪ್ರಾಯೋಜಿಸಿದ ಈ ಪ್ರಯೋಗಾಲಯವನ್ನು ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ ಅವರು ಹಿರಿಯ ಆಡಳಿತಗಾರರು ಮತ್ತು ವೈದ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಮಾಹೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್; ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್; ಮಾಹೆಯ ಹಿರಿಯ ಸಂಶೋಧನಾ ನಿರ್ದೇಶಕ ಡಾ. ರವಿರಾಜ ಎನ್.ಎಸ್., ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್; ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಕೋರ್ ಮೆಟಬಾಲಿಕ್ ಲ್ಯಾಬ್, ಮಣಿಪಾಲದ ಕೆಎಂಸಿಯಲ್ಲಿರುವ ಮಕ್ಕಳ ವಿಭಾಗ ಮತ್ತು ಜೀವರಸಾಯನಶಾಸ್ತ್ರ ವಿಭಾಗಗಳ ನಡುವಿನ ಸಹಯೋಗದ ಉಪಕ್ರಮವಾದ ಸೆಂಟರ್ ಫಾರ್ ಇನ್‌ಬಾರ್ನ್ ಎರರ್ಸ್ ಆಫ್ ಮೆಟಬಾಲಿಸಂನ ಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಇನ್‌ಬಾರ್ನ್ ಎರರ್ಸ್ ಆಫ್ ಮೆಟಬಾಲಿಸಮ್ (ಐಇಎಂಗಳು) ಮತ್ತು ಅಪೌಷ್ಟಿಕತೆ ಸ್ಪೆಕ್ಟ್ರಮ್ ಅಸ್ವಸ್ಥತೆಗಳು, ವಯಸ್ಕ ಮೆಟಬಾಲಿಕ್ ಕಾಯಿಲೆಗಳು ಸೇರಿದಂತೆ ತಡೆಗಟ್ಟಬಹುದಾದ ಬಾಲ್ಯದ ಕಾಯಿಲೆಗಳಿಗೆ ಉತ್ಕ್ರಷ್ಟ ಪ್ರಮಾಣಿತ ರೋಗನಿರ್ಣಯ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸುವುದು ಹಾಗೂ ವೈವಿಧ್ಯಮಯ ವೈದ್ಯಕೀಯ ಕ್ಷೇತ್ರಗಳಲ್ಲಿ ಕ್ಲಿನಿಕಲ್ ಸಂಶೋಧನೆಯನ್ನು ಮುನ್ನಡೆಸುವುದು ಇದರ ಪ್ರಮುಖ ಧ್ಯೇಯವಾಗಿದೆ. ಯುರೋಪಿಯನ್ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್‌ಗಾಗಿ ಭಾರತದ ಮೊದಲ ಸಂಪೂರ್ಣ ಪ್ರಮಾಣೀಕೃತ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಟಂಡೆಮ್ ಮಾಸ್ ಸ್ಪೆಕ್ಟ್ರೋಮೆಟ್ರಿ (ಟ್ರಿಪಲ್ ಕ್ವಾಡ್ರುಪೋಲ್) ವೇದಿಕೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಥರ್ಮೋ ಫಿಶರ್ ಸೈಂಟಿಫಿಕ್‌ನಿಂದ ಈ ವೈದ್ಯಕೀಯ ಸಾಧನ ಸರಣಿಯ ಆರಂಭಿಕ ತಾಣವಾಗಿರುವುದು ಹೆಮ್ಮೆಯ ವಿಷಯ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೆಎಂಸಿಯ ಮಕ್ಕಳ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಹಾಗೂ ಕೇಂದ್ರದ ಸಂಯೋಜಕ ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್ ಅವರು ಮಾತನಾಡುತ್ತಾ ಈ ಉಪಕ್ರಮದ ಹಿಂದಿನ ದೃಷ್ಟಿಕೋನವನ್ನು ಎತ್ತಿ ತೋರಿಸಿದರು. ಅವರಿಗೆ ಜೀವರಸಾಯನಶಾಸ್ತ್ರದ ಮುಖ್ಯಸ್ಥ ಡಾ. ರವೀಂದ್ರ ಮರಡಿ; ಪ್ರಾಧ್ಯಾಪಕಿ ಮತ್ತು ಸಹ-ಸಂಯೋಜಕ ಡಾ. ವರಶ್ರೀ ಬಿ.ಎಸ್.; ಮತ್ತು ಪ್ರಾಧ್ಯಾಪಕ ಡಾ. ಕೃಷ್ಣಾನಂದ ಪ್ರಭು ಆರ್.ವಿ. ಬೆಂಬಲ ನೀಡಲಿದ್ದಾರೆ. ಇವರೆಲ್ಲರೂ ಈ ಅತ್ಯಾಧುನಿಕ ಸೌಲಭ್ಯದ ಸ್ಥಾಪಕ ಸ್ತಂಭಗಳಾಗಿ ಕಾರ್ಯನಿರ್ವಹಿಸಲಿದ್ದಾರೆ
ಪ್ರಯೋಗಾಲಯವು 54 ನಿಯತಾಂಕಗಳನ್ನು ಒಳಗೊಂಡ ವಿಸ್ತೃತ ನವಜಾತ ಶಿಶುಗಳ ಸ್ಕ್ರೀನಿಂಗ್ (ಎನ್‌ಬಿಎಸ್) ಪ್ರಾರಂಭಿಸುವುದಾಗಿ ಘೋಷಿಸಿತು, ಜೊತೆಗೆ ಒಟ್ಟು ಮೆಟಾನೆಫ್ರಿನ್‌ಗಳು ಮತ್ತು ನಾರ್ಮೆಟನೆಫ್ರಿನ್‌ಗಳಿಗೆ ಸುಧಾರಿತ ಪರೀಕ್ಷೆಯನ್ನು ಸಹ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಚಿಕಿತ್ಸಕ ಔಷಧ ಮೇಲ್ವಿಚಾರಣೆಗೆ ವಿಸ್ತರಿಸಲು ಯೋಜನೆಗಳು ನಡೆಯುತ್ತಿವೆ.
ಥರ್ಮೋ ಫಿಶರ್ ಸೈಂಟಿಫಿಕ್‌ನ ವೈದ್ಯಕೀಯ ಸಾಧನ ಸರಣಿಯ ದಕ್ಷಿಣ ಏಷ್ಯಾದ ಆರಂಭಿಕ ತಾಣವಾಗಿ ಕಾರ್ಯನಿರ್ವಹಿಸುವ ಈ ಸೌಲಭ್ಯವು, ಭಾರತದಲ್ಲಿ ಅಂತಹ ಉನ್ನತ-ಮಟ್ಟದ ರೋಗನಿರ್ಣಯವನ್ನು ನೀಡುವ ಕೇವಲ ಆರರಿಂದ ಏಳು ಪ್ರಯೋಗಾಲಯಗಳ ಆಯ್ದ ಗುಂಪಿನಲ್ಲಿ ಮಣಿಪಾಲವು ಸ್ಥಾನ ಪಡೆದಿದೆ. ಗುಣಮಟ್ಟ, ಪಾರದರ್ಶಕತೆ ಮತ್ತು ಸಕಾಲಿಕ ವರದಿ ಮಾಡುವಿಕೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೈಗೆಟುಕುವ ದರದಲ್ಲಿ ಸೇವೆಗಳನ್ನು ಒದಗಿಸಲಾಗುತ್ತದೆ.
ಕರಾವಳಿ ಕರ್ನಾಟಕದಲ್ಲಿ ನವಜಾತ ಶಿಶುಗಳ ಸಾರ್ವತ್ರಿಕ ತಪಾಸಣೆ ಮತ್ತು ಐಇಎಂ ಅಸ್ವಸ್ಥತೆಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಸಮಗ್ರ ಪ್ರಯೋಗಾಲಯವಾಗುವ ತನ್ನ ದೀರ್ಘಕಾಲೀನ ದೃಷ್ಟಿಕೋನದೊಂದಿಗೆ, ಕೋರ್ ಮೆಟಾಬಾಲಿಕ್ ಲ್ಯಾಬ್ ದಕ್ಷಿಣ ಭಾರತದಲ್ಲಿ ಕ್ಲಿನಿಕಲ್ ರೋಗನಿರ್ಣಯ ಮತ್ತು ಸಂಶೋಧನೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ.
ವೈದ್ಯಕೀಯ ಅಧೀಕ್ಷಕರು
