ಸಂತೋಷ್ ನಾಯಕ್ ರವರಿಗೆ ಡಾಕ್ಟರೇಟ್ ಪದವಿ

Spread the love

ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್, ಮಣಿಪಾಲ್ ಅಕಾಡೆಮಿ ಆಫ್ ಎಜುಕೇಶನ್, ಮಣಿಪಾಲದ ಸಹಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಪ್ರಾಧ್ಯಾಪಕಿಯಾದ ಡಾ. ಅಂಕಿತಾ ಶೆಟ್ಟಿ ಇವರ ಸಹಮಾರ್ಗದರ್ಶನದಲ್ಲಿ ಡಾ. ಸಂತೋಷ್ ನಾಯಕ್ ರವರು ಮಂಡಿಸಿದ “ಇನ್ಫ್ಲುಯೆನ್ಸ್ ಆಫ್ ರಿಲೇಶನ್ಶಿಪ್ ಸೆಲ್ಲಿಂಗ್ ಬಿಹೇವಿಯರ್ ಆನ್ ಹೆಲ್ತ್ ಇನ್ಸೂರೆನ್ಸ್: ಎನ್ ಎವಾಲ್ಯೂವೇಶನ್ ಫ್ರಮ್ ಏಜೆಂಟ್ಸ್ ಪರ್ಸ್ಪೆಕ್ಟಿವ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿ.ಎಚ.ಡಿ ಪದವಿ ಪ್ರಧಾನ ಮಾಡಿದೆ.

ಮೂಲತಃ ಬೆಳಗಾವಿಯವರಾದ ಡಾ. ಸಂತೋಷ್ ರವರು ಶ್ರೀಮತಿ ಜಯಶ್ರೀ ನಾಯಕ್ ಹಾಗೂ ಶ್ರೀ ಸುಬ್ರಾಯ ಕೃಷ್ಣ ನಾಯಕ್ ರವರ ಪುತ್ರ. ಕಳೆದ 13 ವರುಷಗಳಿಂದ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್, ಮಣಿಪಾಲದಲ್ಲಿ ಸಹಾಯಕಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Right Click Disabled