ಉಡುಪಿ:ಆದರ್ಶ ಆಸ್ಪತ್ರೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ

ಉಡುಪಿ:ಆದರ್ಶ ಆಸ್ಪತ್ರೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಆದರ್ಶ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞರಾದ ಡಾ| ಸೂರಜ್ ಹೆಗ್ಡೆ ಅವರು ಧ್ವಜಾರೋಹಣಗೈದರು. ತದನಂತರ ಮಾತನಾಡಿದ ಅವರು ಭಾರತ ದೇಶದ ಏಕತೆ ಹಾಗೂ ಸ್ವಾವಲಂಬನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಗೂ ದ್ವಜ ಗೀತೆಯನ್ನು ಹಾಡಲಾಯಿತು.ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ. ಎಸ್ ಚಂದ್ರಶೇಖರ್ ಹಾಗೂ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು , ವೈದ್ಯಕೇತರ ಸಿಬ್ಬಂದಿಗಳು ಹಾಗೆಯೇ ರೋಗಿಗಳ ಪಾಲಕರು , ಆಸ್ಪತ್ರೆಯ ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಆಸ್ಪತ್ರೆಯ ಹಿರಿಯ ಪ್ರಬಂಧಕರಾದ ಡಿಯಾಗೋ ಕ್ವಾಡ್ರಾಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.