ಪಿ.ವಿ.ಆಚಾರ್ಯ ಜನ್ಮಶತಾಬ್ದ ಆಚರಣೆಪಡುಬಿದ್ರಿ,ಆ. 14 : ಶಿಕ್ಷಕ
- ಶಿಕ್ಷಣ ಸಂಸ್ಥೆ ಹಾಗೂ ದೇವಾಲಯ ವ್ಯವಸ್ಥೆಯಲ್ಲಿ ಸುವ್ಯವಸ್ಥೆ ಸ್ಥಾಪಿಸಿದ ಪಡುಬಿದ್ರಿಯ ವೆಂಕಟ್ರಮಣಾಚಾರ್ಯ ಅವರ ಜನ್ಮ ಶತಾಬ್ದ ಕಾರ್ಯಕ್ರಮವು ಆ.15 ರಂದು ಪೂರ್ವಾಹ್ಮ 11:00 ಗಂಟೆಗೆ ಪಡುಬಿದ್ರಿಯ ಗಣಪತಿ ಪ್ರೌಢ ಶಾಲೆಯ ವಿಬುಧೇಶ ತೀರ್ಥ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ "ಆಚಾರ್ಯಂ ಪ್ರಣಮಾಮಃ" ಸ್ಮರಣೆಯ ಸಂಪುಟವು ಅನಾವರಣಗೊಳ್ಳಲಿದ್ದು ಅದು ಆಚಾರ್ಯರ ಜ್ಞಾಪಕಾರ್ಥವಾಗಲಿದೆ ಎಂದು ಪ್ರಾಕ್ತನ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ತಿಳಿಸಿದ್ದಾರೆ. ~~~~~~~~~~~~~~

