ಐಕನಹಳ್ಳಿ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಸಾಸಲು ಗ್ರಾಮದ ಈರಾಜು ರವರು ಅವಿರೋಧವಾಗಿ ಆಯ್ಕೆ

Spread the love

ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು.. ಉಪಾಧ್ಯಕ್ಷ ಸ್ಥಾನ ಬಯಸಿ ಸಾಸಲು ಗ್ರಾಮ ಪಂಚಾಯತಿ ಸದಸ್ಯ ಈರಾಜು ರವರನ್ನು ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾದ ಸಿ.ಡಿ.ಪಿ.ಓ ಅರುಣ್ ಕುಮಾರ್ ರವರು ಐಕನಹಳ್ಳಿ ಗ್ರಾಮ ಪಂಚಾಯತಿಯ ನೂತನ‌ ಉಪಾದ್ಯಕ್ಷರಾಗಿ ಈರಾಜು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು

ಇದೇ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಈರಾಜು ರವರನ್ನು ಸನ್ಮಾನಿಸಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ಶಾಸಕರಾದ ಎಚ್.ಟಿ. ಮಂಜು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾದ ಪುಟ್ಟಸಾಮಿಗೌಡ ರವರು ಮಂಡ್ಯ ಜಿಲ್ಲಾ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಬಿ. ಎಂ . ಕಿರಣ್ , ತಾಲ್ಲೂಕು ಪಂಚಾಯಿತಿ ಸದಸ್ಯರಾದ ಐಕನಹಳ್ಳಿ ಶಾರದಮ್ಮಕೃಷ್ಣೆಗೌಡ್ರು, ಜೆ.ಡಿ.ಎಸ್ ಪಕ್ಷದ ಯುವ ಮುಖಂಡರಾದ ಐಕನಹಳ್ಳಿ ಉದಯಣ್ಣ, ಮಾರ್ಗದರ್ಶನದಲ್ಲಿ ಇಂದು ನೆಡೆದ ಐಕನಹಳ್ಳಿ ಗ್ರಾಮ ಪಂಚಾಯಿತಿಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ನೀರು, ಗ್ರಾಮಗಳ ಸ್ವಂಚತೆ, ಬೀದಿ ದೀಪ ಸೇರಿದಂತೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಶ್ರಮಿಸುವಂತೆ ಸಲಹೆ ನೀಡಿದರು

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಉಪಾಧ್ಯಕ್ಷ ಈರಾಜು ಮಾತನಾಡಿ ಪಕ್ಷ ಬೇಧ ಮರೆತು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ನನ್ನ ಅವಧಿಯಲ್ಲಿ ಯಾವುದೇ ಲೋಪವಾಗದೆ ಸರ್ವ ಸದಸ್ಯರ ಸಹಕಾರದಿಂದ ಉತ್ತಮ ಆಡಳಿತ ನಡೆಸುತ್ತೇವೆ ಎಂದರು..

ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿ.ಎ.ಪಿ.ಎಂ.ಸ್ ಮಾಜಿ‌ ನಿರ್ದೇಶಕ ಉದಯ್ ಶಂಕರ್, ಐನೋರಹಳ್ಳಿ ಗ್ರಾಮದ ಹಿರಿಯ ಮುಖಂಡ ಚಂದ್ರಣ್ಣ, ಸಾಸಲು ಸೋಮೇಶ್ವರ ದೇವಾಲಯದ ಅರ್ಚಕರಾದ ಶಂಭುಲಿಂಗಪ್ಪ, ಛೇರ್ಮೆನ್ ಮಂಜಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ್, ಕಾರ್ಯದರ್ಶಿ ಯೋಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಂಬುಜಾ, ಸದಸ್ಯರಾದ ನಂಜುಂಡೇಗೌಡ, ಸುವರ್ಣ, ಕುಮಾರ್ ಎನ್, ದೇವರಾಜು, ನಾಗಮಣಿ, ಪ್ರಸನ್ನ . ಪಲ್ಲವಿ , ಭಾಗ್ಯಮ್ಮ, ಮಂಜೇಗೌಡ, ಶಂಕರ, ಸುಧಾ, ಸುಮಿತ್ರ, ಕೆ. ಎಸ್ ಕವಿತಾ, ಗ್ರಾಮದ ಮುಖಂಡರುಗಳು ಸೇರಿದಂತೆ ಮತ್ತಿತ್ತರರು ಇದ್ದರು.ವರದಿ: ಲೋಕೇಶ್.ವಿ

Right Click Disabled