ಕರಾವಳಿ ಮತ್ತು ನಾಗ ಪಂಚಮಿ

ಕರಾವಳಿ ಪ್ರದೇಶದಲ್ಲಿ ನಾಗ ಪಂಚಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಎಂದು ಅಂದರೆ ಶ್ರಾವಣ ಮಾಸದ ಐದನೇ ದಿನಕ್ಕೆ ಆಚರಿಸುವ ಹಿಂದುಗಳ ಭಕ್ತಿ ಭಾವ ಸಂಕೇತದ ಹಬ್ಬವಾಗಿದ್ದು.
ಈ ದಿವಸ ನಾಗ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ ಕರಾವಳಿಯಲ್ಲಿ ನಾಗರಾಧನೆ ಬಹಳ ಮುಖ್ಯವಾಗಿದ್ದು ನಾಗಬನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಕುಕ್ಕೆ ಸುಬ್ರಹ್ಮಣ್ಯ,ಕುಡುಪು ಅನಂತಪದ್ಮನಾಭ ದೇವಸ್ಥಾನ ಮೊದಲಾದ ಕಡೆ ನಾಗರ ಪಂಚಮಿಯೆಂದು ವಿಶೇಷ ಪೂಜೆಗಳು ನಡೆಯುತ್ತದೆ. ಮುಂಜಾನೆಯಿಂದ ಭಕ್ತಾದಿಗಳು ಸೇರಿ ಪೂಜಿಸುವ ಪರಿ ನೋಡುವುದೇ ಒಂದು ಆನಂದ, ನಾವು ಸಹ ಭಾಗಿಯಾದರೆ ಇನ್ನೂ ಉಲ್ಲಾಸ ಉತ್ಸಾಹ ಹಾಗೂ ಭಕ್ತಿ ಭಾವದ ಪರಮಾನಂದ.
ಕರಾವಳಿ ಪ್ರದೇಶದಲ್ಲಿ ಅನೇಕ ಕಡೆ ನಾಗಬನಗಳಿವೆ, ಈ ನಾಗಬನಗಳಲ್ಲಿ ನಾಗದೇವರ ಕೆತ್ತನೆಯ ಮೂರ್ತಿ ಅಥವಾ ಹುತ್ತವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ
ಕೆಲವು ನಾಗಬನಗಳು ಆಯಾಯ ಕುಟುಂಬಕ್ಕೆ ಸೇರಿದ್ದು ಮೂಲ ಬನಗಳೆಂದು ಕರೆಯಲ್ಪಡುತ್ತದೆ
ನಾಗರ ಪಂಚಮಿಯಂದು ನಾಗ ದೇವರಿಗೆ ಹಾಲು ಎಳೆ ನೀರು ಮುಂತಾದವುಗಳು ಅರ್ಪಿಸಿ ಪೂಜಿಸಲಾಗುತ್ತದೆ ನಾಗರಪಂಚಮಿ ಹಬ್ಬದ ನಂತರ ರಕ್ಷಾಬಂಧನ,ಕೃಷ್ಣ ಜನ್ಮಾಷ್ಟಮಿ,ಗಣೇಶ ಚತುರ್ಥಿ. ಮುಂತಾದ ಹಬ್ಬಗಳು ಬರುತ್ತದೆ.
ನಾಗಬನಗಳು ಪರಿಸರ ಮತ್ತು ಅಂತರ್ಜಲ ಸಂರಕ್ಷಣೆಗೆ ಮುಖ್ಯವೆಂದು ನಂಬಲಾಗಿದೆ.
ಶ್ರಾವಣ ಮಾಸದಲ್ಲಿ ಮೊದಲು ಬರುವ ಹಬ್ಬ ಇದಾಗಿದ್ದು, ಭಯ ಭಕ್ತಿಯಿಂದ ಆಚರಿಸುವ ಈ ಹಬ್ಬವುಹಾಗೂ ಹಿಂದುಗಳಿಗೆ ಶ್ರೇಷ್ಠವಾದ ಹಬ್ಬವಾಗಿದೆ.
ಮುಂಜಾನೆ ಹೊತ್ತಿನಲ್ಲಿ ಎದ್ದು ಪ್ರತಿಯೊಬ್ಬರೂ ಸ್ನಾನದಿ ನಿತ್ಯ ಕರ್ಮಗಳನ್ನು ಮುಗಿಸಿ ಕುಟುಂಬದವರು ತಲಾತಲಾಂತರ ಗಳಿಂದ ನಂಬಿಕೊಂಡು ಬಂದಿರುವ ನಾಗಬನದಲ್ಲಿ ಶ್ರೀ ನಾಗದೇವರಿಗೆ ತನು ಹಾಕುವುದು ವಾಡಿಕೆ.
ಈ ಹಬ್ಬವು ಮಾನವ ಮತ್ತು ಪ್ರಕೃತಿ ನಡುವಿನ ನಿಕಟ ಸಂಬಂಧವನ್ನು ಸೂಚಿಸುತ್ತದೆ ಕರಾವಳಿ ಪ್ರದೇಶವು ಸರ್ಪ ದೇವರ ವಾಸಸ್ಥಾನವಾಗಿರುವುದರಿಂದ
ಈ ನಾಗರಾಧನೆ ಆಚರಣೆಯಲ್ಲಿ ಶ್ರದ್ಧೆಯಿಂದ ನಂಬಿಕೆ ಮತ್ತು ಭಕ್ತಿ ಭಾವದಿಂದ ಮನೆ ಎಲ್ಲಾ ಸದಸ್ಯರು ಉಪಸ್ಥಿತರಿರುತ್ತಾರೆ.
✍️ಈಶ್ವರ್ ಸಿ ನಾವುಂದ*
ಚಿಂತಕರು ಮತ್ತು ಬರಹಗಾರರು.
