2025ರ ಜೆಇಇ ಮುಖ್ಯ ಪರೀಕ್ಷೆ : 99.90 ಶೇ ಅಂಕ ಗಳಿಸಿದ ಅನಿಕೇತ್ ಡಿ ಶೆಟ್ಟಿ, ವಿಠಲ್ ದಾಸ್ ಎ

ಮಂಗಳೂರು : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್.ಎಲ್), ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆ 2025 (ಸೆಷನ್- 2) ನಲ್ಲಿ ತಮ್ಮ ವಿದ್ಯಾರ್ಥಿಗಳ ಅಸಾಧಾರಣ ಸಾಧನೆಯನ್ನು ಹೆಮ್ಮೆಯಿಂದ ಘೋಷಿಸಿದೆ.
ಮಂಗಳೂರಿನ ಅನಿಕೇತ್ ಡಿ ಶೆಟ್ಟಿ ಮತ್ತು ವಿಟ್ಟಲ್ ದಾಸ್ ಎ ಪರೀಕ್ಷೆಯ ಎರಡನೇ ಅವಧಿಯಲ್ಲಿ 99.90 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ.
ಈ ಫಲಿತಾಂಶಗಳು ಭಾರತದ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಮರ್ಪಣೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತವೆ. ಈ ವರ್ಷ ನಿಗದಿಯಾಗಿದ್ದ ಎರಡನೇ ಮತ್ತು ಅಂತಿಮ ಜೆಇಇ ಸೆಶನ್ ವೇಳಾಪಟ್ಟಿ ಅಂತಿಮವಾಗುತ್ತಿದ್ದAತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶಗಳನ್ನು ಪ್ರಕಟಿಸಿದೆ. .
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಮಾತನಾಡಿ, ಜೆಇಇ ಮೇನ್ 2025 ರಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯ, ಸರಿಯಾದ ತರಬೇತಿಯೊಂದಿಗೆ ಸೇರಿ ಈ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗಿದೆ. ನಮ್ಮ ಎಲ್ಲಾ ಯಶಸ್ವಿ ವಿದ್ಯಾರ್ಥಿಗಳಿಗೆ ಪ್ರಯಾಣದ ಮುಂದಿನ ಹಂತಗಳಿಗೆ ಶುಭ ಹಾರೈಸುತ್ತೇವೆ ಎಂದರು.
AESL , ಉನ್ನತ ಮಟ್ಟದ ವೈದ್ಯಕೀಯ ( NEET ) ಮತ್ತು ಎಂಜಿನಿಯರಿAಗ್ ಪ್ರವೇಶ ಪರೀಕ್ಷೆಗಳು (ಎಇಇ) ಹಾಗೂ NTSE ಮತ್ತು ಒಲಿಂಪಿಯಾಡಗಳAತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಮತ್ತು ಪರಿಣಾಮಕಾರಿ ತಯಾರಿ ಕಾರ್ಯಕ್ರಮ ಗಳನ್ನು ನೀಡುವುದಕ್ಕೆ ಗುರುತಿಸಲ್ಪಟ್ಟಿದೆ.
ಈ ವೇಳೆ ಬ್ರಾಂಚ್ ಹೆಡ್ ಸೂರಜ್ ಪ್ರಭು, ಮಂಗಳೂರು – ಉಡುಪಿ ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.