ಗುತ್ತಿಗೆದಾರರು ಸೇರಿ ಮಾಧ್ಯಮದ ಮುಂದೆ ಪತ್ರಿಕೆ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ

Spread the love

ಕುಂದಾಪುರ ಪುರಸಭೆಯ 15ನೇ ಹಣಕಾಸು ‌ವಿನಿಯೋಗಕ್ಕೆಸಂಬಂಧಿಸಿದಂತೆ 23 ವಾರ್ಡಿನಲ್ಲಿ ಕಾಮಗಾರಿ ನಿರ್ವಹಿಸಲು, ಟೆಂಡರ್ ಪ್ರಕ್ರಿಯೆಯಲ್ಲಿ ಪುರಸಭಾ ಅಧ್ಯಕ್ಷರ ಹಸ್ತಾಕ್ಷೇಪದ ಬಗ್ಗೆ ಮತ್ತು ಪುರಸಭೆಗೆ ಆಗುವ ನಷ್ಟದ ಬಗ್ಗೆ ಬಹಳಷ್ಟು ಚರ್ಚೆ ಹುಟ್ಟು ಹಾಕಿದೆ.

ಯಾವುದೇ ಒಬ್ಬ ಸದಸ್ಯನು ಕೂಡ ಪುರಸಭೆಯ ಆದಾಯಕ್ಕೆ ಸಂಬಂಧಿಸಿದಂತೆ ನಷ್ಟ ಉಂಟು ಮಾಡಬಾರದು ಎಂಬುದನ್ನು ಪುರಸಭೆಯ ಅಧಿನಿಯಮ 1964 ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅದರಲ್ಲೂ ಪುರಸಭೆಯ ಅಧ್ಯಕ್ಷರು ನೇರವಾಗಿ ಗುತ್ತಿಗೆದಾರರನ್ನು ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ನಡೆಯುವ ಮಾನ್ಯ ಶ್ರೀ ದಿವಂಗತ ಡಾ.ವಿ.ಎಸ್.ಆಚಾರ್ಯರವರ ಸಭಾಂಗಣದಲ್ಲಿ ಅನಧಿಕೃತವಾಗಿ ಸಭೆ ನಡೆಸಿ ಕಾಮಗಾರಿಯನ್ನು ಹಂಚಿಕೆ ಮಾಡಿರುವುದು ಸ್ಪಷ್ಟ.ಅದು ಮಾನ್ಯ ಅಧ್ಯಕ್ಷರ ದೃಶ್ಯ ಮಾಧ್ಯಮದ ಹೇಳಿಕೆಯಲ್ಲಿ ದೃಢವಾಗಿದೆ.

ಇಷ್ಟಾಗಿಯೂ ಇಂದು ಗುತ್ತಿಗೆದಾರರು ಸೇರಿ ಇದರಲ್ಲಿ ಅಧ್ಯಕ್ಷರದ್ದು ಏನು ತಪ್ಪಿಲ್ಲ ನಾವು ಗುತ್ತಿಗೆದಾರರು ಸೇರಿ ಅಧ್ಯಕ್ಷರನ್ನು ಅಭಿನಂದಿಸಲು ಹೋದ ಸಂದರ್ಭದಲ್ಲಿ ಈ ಒಂದು ವಿಚಾರ ನಾವೇ ಪ್ರಸ್ತಾಪಿಸಿರುವುದು.ಇದರಲ್ಲಿ ಅಧ್ಯಕ್ಷರ ಪಾತ್ರ ಏನು ಇಲ್ಲ ಎಂಬುದನ್ನು ಹೇಳ ಹೊರಟಿರುವ ಗುತ್ತಿಗೆದಾರರು ಒಂದನ್ನು ಗಹನವಾಗಿ ಗಮನಿಸಬೇಕು.

ನಿಮ್ಮ ಹೇಳಿಕೆಗಳಲ್ಲೂ ದ್ವಂದ್ವ ಎದ್ದು ಕಾಣುತ್ತದೆ ದಿನಾಂಕ 04/09/2024 ರಂದು ಪುರಸಭೆಯ ಕಚೇರಿಯ ಸಭಾಂಗಣದಲ್ಲಿ ಅನಧಿಕೃತವಾಗಿ ನಡೆದಿರುವ ಸಭೆಯ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಹೊರತು ಸುಖಾಸುಮ್ಮನೆ ಆರೋಪ ಹೊರಿಸಿ ನಾಟಕ ನೋಡುವ ಉದ್ದೇಶ ಹೊಂದಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ನೀವು ಅಧ್ಯಕ್ಷರ ಪರ ವಹಿಸಿಕೊಂಡು ಮಾತಾಡಿರುವುದಕ್ಕೆ ಇಲ್ಲೀ ಯಾರಿಗೂ ಆತಂಕವಾಗಲಿ,ಬೇಸರವಾಗಲಿ ಇಲ್ಲ.ಇದು ಕೂಡ ಒಂದು ನೀವು ಕೊಟ್ಟ ಮಾಹಿತಿ ಆಗಿರುತ್ತದೆ ಮತ್ತು ಇದನ್ನು ಜೋಪಾನವಾಗಿ ಇಟ್ಟುಕೊಂಡು ಅವಶ್ಯಕತೆ ಬಿದ್ರೇ ಉಪಯೋಗಿಸಿಕೊಳ್ಳಲಾಗುವುದು. ಯಾರು ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿಲ್ಲ ಪುರಸಭೆ ನಷ್ಟ ಆಗಲಿದೆ ಎಂದಾಷ್ಟೇ ಸ್ಪಷ್ಟೋಕ್ತೀ ನೀಡಿರುವುದು.

ಇಷ್ಟಾಗಿಯೂ ಪಾರದರ್ಶಕತೆ ಆಡಳಿತ ನೀಡುವ ಅಧ್ಯಕ್ಷರು, ಗುತ್ತಿಗೆದಾರರ ಸಾತ್ ತೆಗೆದು ಕೊಂಡಿರುವುದು ಕುಂದಾಪುರ ಜನತೆಯ ಕುತೂಹಲಕ್ಕೆ ಕಾರಣವಾಗಿದೆ. ಕುಂದಾಪುರ ಪುರಸಭೆಯ ಅಭಿವೃದ್ಧಿ ವಿಚಾರದಲ್ಲಿ ಯಾವೋತ್ತು ಧ್ವನಿ ಎತ್ತಿ,ಪ್ರಬಲ ಪ್ರತಿಪಕ್ಷವಾಗಿ ಮುಂದಕ್ಕೂ ಜನಪರವಾಗಿ ಆಡಳಿತ ಪಕ್ಷದ ನ್ಯೂನತೆಗಳನ್ನು ಎಳೆ ಎಳೆಯಾಗಿ ಜನತೆಯ ಮುಂದಿಡುವ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ಚಂದ್ರಶೇಖರ ಖಾರ್ವಿ ಪುರಸಭ ಸದಸ್ಯ ಹೇಳಿದ್ದಾರೆ.

Right Click Disabled