ಟೆಂಡರ್ ಪ್ರಕಿಯೆಯಲ್ಲಿ ಗೋಲ್ಮಾಲ್ ಎಂದು ವಿಕಾಸ್ ಹೆಗ್ಡೆರವರು ತನಿಖೆಗೆ ಆದೇಶ ಮಾಡಿ ಎಂದು ಅಗ್ರಹಿಸಿದರೆ ; ದೇವಕಿ ಸಣ್ಣಯ್ಯರವರು ಕಾಂಗ್ರೆಸ್ ಸದ್ಯಸರಿಗೆ ಬೇಡ ಬಿಟ್ಟು ಬಿಡಿ ಎಂದು ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗಿದ್ದು ಎಷ್ಟು ಸರಿ?
ಕುಂದಾಪುರ : (ಹಾಯ್ ಕರಾವಳಿ) ಈಗಾಗಲೇ ವಿಕಾಸ್ ಹೆಗ್ದೆಯವರು ಕುಂದಾಪುರ ಪುರಸಭೆ ಅಧ್ಯಕ್ಷರಾದ ಮೋಹನ್ ದಾಸ ಶೈಣೆಯವರ ಮೇಲೆ ಟೆಂಡರ್ ನಲ್ಲಿ ಗೋಲ್ ಮಾಲ್ ಆಗಿದೆ, ಇದರಿಂದ ಕುಂದಾಪುರ ಪುರಸಭೆಗೆ ಸಾಕಷ್ಟು ನಷ್ಟ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಕಾಂಗ್ರೆಸ್ ಪಕ್ಷದ ಹಿರಿಯ ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯರವರು ಕಾಂಗ್ರೆಸ್ ಸದಸ್ಯರಲ್ಲಿ ಸುಮ್ಮನೆ ವಿಷಯ ದೊಡ್ಡದು ಮಾಡುವುದು ಬೇಡ ಮೋಹನ್ ದಾಸ ಅವರೇ ಮುಂದುವರೆಯಲಿ ಅವರು ಇದ್ದರೆ ನಮಗೂ ಅನುಕೂಲ ಆಗುತ್ತೆ ಎನ್ನುವುದರ ಮುಖಿಯಿಂದ ಹೊಂದಾಣಿಕೆ ರಾಜಕಾರಣ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ.
ಇವರು ಹಿಂದೆ ಒಂದು ಮುಂದೊಂದು ಮಾತಾಡುವುದು ಮೊದಲಿನಿಂದ ಇವರ ಪ್ರವೃತ್ತಿ ಕೆಲವೊಂದು ಸರಿ ಕಾಂಗ್ರೆಸ್ ಪಕ್ಷದಲ್ಲಿ ನಾನೇ ಹಿರಿಯ ನಾಯಕಿ ಹಿರಿಯ mla, mp ಕಾಂಗ್ರೆಸ್ ನಾಯಕರುಗಳಿಗೆ ಅಗೌರವ ತೋರಿರುವುದು ಇದೇನೂ ಹೊಸತಲ್ಲ ಮೊದಲು ನಾನೇ ಬಂದಿದ್ದು, ಈ ಹಿಂದೆಯೂ UGD ಹಗರಣವನ್ನು ಬಗೆದು ತಪ್ಪಿದಸ್ಥರನ್ನು ಜೈಲಿಗಟ್ಟುತ್ತೇನೆ ಎಂದು ಹೇಳಿದ ದೇವಕಿ ಸಣ್ಣಯ್ಯ ಏಕಾಏಕಿ ಆ ಹೋರಾಟವನ್ನು ಬಿಟ್ಟಿದ್ದೇಕೆ? ಇನ್ನೂ ಹಲವಾರು ಪ್ರಕರಣಗಳನ್ನು ಹೊರತೆಗೆದು ತಪ್ಪಿದಸ್ತರಿಗೆ ಶಿಕ್ಷೆ ಕೊಡುತ್ತೇನೆ ಎಂದು ಹೇಳಿ ನಂತರ ಸುಮ್ಮನೆ ಕೂತಿದ್ದೆಕೆ?
ವಿಕಾಸ್ ಹೆಗ್ದೆಯವರೇ ಮೊದಲು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ದೇವಕಿ ಸಣ್ಣಯ್ಯರವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಹಾಲಿ ಅಧ್ಯಕ್ಷರು ಮಾಡಿದ ಟೆಂಡರ್ ಗೋಲ್ಮಾಲ್ ವಿರುದ್ಧ ಕ್ರಮ ಕೈಗೊಳ್ಳುವುದು ಕೇವಲ ಹೇಳಿಕೆ ಆದರೆ ಸಲ್ಲದು, ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿ ತಪ್ಪಿದಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಂದಾಪುರದ ಜನತೆ ಆಗ್ರಹಿಸುತ್ತಿದ್ದಾರೆ.