ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಇಂಟರಾಕ್ಟ ಪದಗ್ರಹಣ

Spread the love

ರೋಟರಿ ಉಡುಪಿ ಪ್ರಾಯೋಜಿತ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್, ಉಡುಪಿ ಇಲ್ಲಿಯ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ಇತ್ತೀಚಿಗೆ ನೆರವೇರಿತು. ರೋಟರಿ ಉಡುಪಿಯ ಮಾಜಿ ಅಸಿಸ್ಡೆಂಟ್ ಗವರ್ನರ್ ರೋ. ರಾಮಚಂದ್ರ ಉಪಾಧ್ಯಾಯರು ಇಂಟರಾಕ್ಟ್ ಅಧ್ಯಕ್ಷ ಯಶಸ್ ಅವರಿಗೆ ಪದಪ್ರಧಾನ ನೆರೆವೆರಿಸಿ ಹೊಸತಂಡಕ್ಕೆ ಶುಭಹಾರೈಸಿದರು. ಇಂಟರಾಕ್ಟ ಅದ್ಯಕ್ಷ ಯಶಸ್ ತಮ್ಮ ತಂಡದ ಪರಿಚಯ ಮಾಡಿದರು. ಸಂಪನ್ಮೂಲ ಅತಿಥಿ ಮಣಿಪಾಲ ಕಾಲೇಜಿನ ಫಾರೆನ್ಸಿಕ ವಿಬಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಅಶ್ವಿನಿ ಕುಮಾರ್ ಅವರು ಹಾಸ್ಟೇಲ್ ಜೀವನದ ಯಶಸ್ವಿ ನಿರ್ವಹಣೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲ ರೋ. ವಿನ್ಸಟ್ ಡಿ’ಕೊಷ್ಟಾ, ಶಿಕ್ಷಕ ಸಂಯೋಜಕಿ ಶ್ರೀ ಮತಿ ವೀಣಾ, ರೋಟರಿ ಉಡುಪಿಯ ರೋ.ಸುಬ್ರಹ್ಮಣ್ಯ ಕಾರಂತ, ಇಂಟರಾಕ್ಟ್ ಸಭಾಪತಿ ರೋ.ಸಾದನಾ ಮುಂಡ್ಕೂರ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Right Click Disabled