ಮಕ್ಕಳ ಜೀವದಲ್ಲಿ ಚೆಲ್ಲಾಟವಾಡುತ್ತದೆಯೇ ಜಿಲ್ಲಾಡಳಿತ? ಶ್ರೀರಾಮಸೇನೆ ಆಕ್ರೋಶ

Spread the love


ಕಳೆದ 3 ದಿನದಿಂದ ಕರಾವಳಿಯಲ್ಲಿ ಕುಂಭದ್ರೋಣ ಮಳೆಯು ಧಾರಾಕಾರವಾಗಿ ಸುರಿಯುತ್ತಿದ್ದು, ತಗ್ಗು ಪ್ರದೇಶ, ಮನೆ, ಅಂಗಡಿಗಳಿಗೆ ನೀರು ನುಗ್ಗಿ, ನೆರೆ ಭೀತಿಯಿಂದ ಜನರು ತಳ್ಳಣವಾಗುವಂತೆ ಮಾಡಿದೆ.

ಇಂಥ ಗಂಭೀರ ಮಳೆಯ ಅವಾಂತರ ಕಂಡು ನೆರೆಯ ದ. ಕ ಹಾಗೂ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಡಳಿತ ಮಕ್ಕಳ ಹಿತದೃಷ್ಟಿ ಯಿಂದ ಶಾಲಾ ಕಾಲೇಜು ಗಳಿಗೆ ರಜೆ ಸಾರಿತು.
ಆದರೆ ಹವಾಮಾನ ಇಲಾಖೆ ಎಚ್ಚರಿಸಿದ್ದರೂ ಉಡುಪಿ ಜಿಲ್ಲಾಡಳಿತ ಮಕ್ಕಳ ರಜೆಯ ವಿಷಯದಲ್ಲಿ ಮೌನ ವಹಿಸಿ, ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವುದು ಅತ್ಯಂತ ನಾಚಿಕೆಗೇಡಿನ ವಿಷಯ.

ಈ ಕೂಡಲೇ ಉಡುಪಿ ಜಿಲ್ಲಾಡಳಿತ ಮಕ್ಕಳ ಹಿತದೃಷ್ಟಿಯಿಂದ, ಮಳೆ ಹಾಗೂ ನೆರೆಹಾವಳಿ ಕಡಿಮೆಯಾಗುವ ವರೆಗೂ ಎಲ್ಲಾ ಶಾಲೆ -ಕಾಲೇಜುಗಳಿಗೆ ರಜೆ ಘೋಷಿಸಿ ಮಕ್ಕಳ ಹಿತ ಕಾಪಾಡಲಿ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಉಡುಪಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Right Click Disabled