ದಿ ನ್ಯಾಷನಲ್ ಕಾಲೇಜ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Spread the loveಬೆಂಗಳೂರು: ಜೂನ್, 06: ನಿನ್ನೆ ನಡೆದ ದಿ ನ್ಯಾಷನಲ್ ಕಾಲೇಜ್ (ಸ್ವಾಯತ), ಬಸವನಗುಡಿ ಬೆಂಗಳೂರು ಇಲ್ಲಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನ ಆಚರಿಸಲಾಯಿತು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಬನವಾಸಿಗೆ ಭೇಟಿ ನೀಡಿ ಅಲ್ಲಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಪರಿಸರ ಸಂರಕ್ಷಣೆಯಲ್ಲಿ ಸಾವಯವ ಕೃಷಿ ಪದ್ಧತಿಯ ಕೊಡುಗೆಯ ಬಗ್ಗೆ ಮಾಹಿತಿ ಪಡೆದು, ಕಸಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ ತೊಡಗಿಸಿಕೊಂಡರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಯೋಗಿತಾ. ಪಿ ಇದರ ನೇತೃತ್ವವನ್ನು ವಹಿಸಿದ್ದರು. ವಿದ್ಯಾರ್ಥಿಗಳು ಪರಿಸರದ ಮೇಲಿನ ಮೇಲೆ ಆಗುತ್ತಿರುವ ಋಣಾತ್ಮಕ ಪರಿಣಾಮವನ್ನು ಮನಗಂಡು ಶೂನ್ಯ ತ್ಯಾಜ್ಯ ನಿರ್ವಹಣೆಯನ್ನು ಪಣತೊಟ್ಟು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸುವಂತೆ ಮತ್ತು ಅದರ ಅಳವಡಿಸಿಕೊಳ್ಳುವಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮಾಣವಚನವನ್ನು ಮಾಡಿ ವಿಶಿಷ್ಟವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲು ಪಣತೊಟ್ಟರು.
ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರಾಷ್ಟೀಯ ಸೇವಾ ಯೋಜನೆ ಮತ್ತು ಎನ್ ಸಿಸಿ ವಿದ್ಯಾರ್ಥಿಗಳಲ್ಲಿ ಶೂನ್ಯ ತ್ಯಾಜ್ಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಅವರಿಂದ ಪ್ರಮಾಣ ವಚನ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ.ಸಿ ಕಮಲ, ಎನ್ಎಸ್ಎಸ್ ನ ಸಂಯೋಜಕರಾದ ಡಾ. ಪದ್ಮ, ಎನ್ ಸಿಸಿ ಮುಖ್ಯಸ್ಥರಾದ ಪ್ರೊ. ಪ್ರಕಾಶ್ ಸಿ.ಆರ್ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಯೋಗಿತಾ.ಪಿ ಇದ್ದರು.

Right Click Disabled