ಕಾರ್ಯಕರ್ತ ಮತದಾರರೇ* *ಪಕ್ಷದ ಆಸ್ತಿ* :-
*ಶ್ರೀ. ಕೆ.ಜಯಪ್ರಕಾಶ್ ಹೆಗ್ಡೆ*

Spread the love


ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿ “ಇಂದಿರಾ ಭವನ” ದಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆ ನಲ್ಲಿ ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮುಂಬರುವ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ  ವಿಧಾನ ಪರಿಷತ್ ಚುನಾವಣೆ ಮಾಹಿತಿ ಬಗ್ಗೆ  ಕೋಟ ಕಾಂಗ್ರೆಸ್ ಅಧ್ಯಕ್ಷರಾದ *ಶಂಕರ ಎ ಕುಂದರ್* ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಂದಿನ ಈ ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ *ಅಶೋಕ್ ಕೊಡವೂರ್* ರವರು ಮುಂಬರುವ ವಿಧಾನ ಪರಿಷತ್ ಚುನಾವಣೆಯ ಅಂಕಿ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ದರು.
ಹಾಗೆ *ಶ್ರೀ ಕೆ ಜಯಪ್ರಕಾಶ್ ಹೆಗ್ಡೆ* ರವರು ಸಭೆಯಲ್ಲಿ ಮಾತನಾಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯದ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾರ್ಯಕರ್ತರ ಹಾಗೂ ಸ್ಥಳೀಯ ಮುಖಂಡರ ಪರಿಶ್ರಮ ಪಕ್ಷದ ಗೆಲುವಿಗೆ ಪೂರಕ ವಾತಾವರಣ ಕಲ್ಪಿಸಲಿದೆ. ಈ ದಿಸೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಬೇಕಾದದ್ದು ನನ್ನ ಆದ್ಯಕರ್ತವ್ಯವಾಗಿದೆ. ಚುನಾವಣೆ ಮುಂಚೆ ಹಾಗೂ ನಂತರ ಪಕ್ಷದ ಕಾರ್ಯಕರ್ತರ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದ ಅವರು ನಿರಂತರ ಸಂಪರ್ಕದಿಂದ ಸದೃಢ ಪಕ್ಷ ಸಂಘಟನೆ ಸಾಧ್ಯ, ಅಲ್ಲದೆ ವಿಧಾನಪರಿಷತ್ ನಲ್ಲಿ ನಮ್ಮ ಪಕ್ಷದ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳಬೇಕು ಆ ಮೂಲಕ ಅನೇಕ ಅಭಿವೃದ್ಧಿ ಕಾಮಗಾರಿ ಬಿಲ್ ಪಾಸ್ ಗೆ ಅನುಕೂಲಕರ ವಾತಾವರಣಸೃಷ್ಠಿಯಾಗುತ್ತದೆ ಎಂದು ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ *ದಿನೇಶ್ ಹೆಗಡೆ* *ಮೊಳಹಳ್ಳಿ* , ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷರಾದ *ಕಿಶನ್ ಹೆಗಡೆ ಕೊಲ್ಕೆಬೈಲು,* ಮಾಜಿ ಬ್ಲಾಕ್ ಅಧ್ಯಕ್ಷರಾದ *ಉದಯ ಚಂದ್ರ ಶೆಟ್ಟಿ ಕಾವಡಿ,* ಉಡುಪಿ ಜಿಲ್ಲಾ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷರಾದ *ತಿಮ್ಮ ಪೂಜಾರಿ* *ಕೋಟ* , ಕೋಟ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ *ರೇಖಾ ಪಿ* *ಸುವರ್ಣ* , ಉಡುಪಿ ಜಿಲ್ಲಾ RGP ಜಿಲ್ಲಾಧ್ಯಕ್ಷರಾದ *ರೋಷನಿ* *ಒಲೆವಿರಾ* , ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ *ರೋಷನ್ ಶೆಟ್ಟಿ,* *ಮಮತಾ* *ಕಿಶೋರ್ ಶೆಟ್ಟಿ* *ಹೆಗ್ಗುಂಜಿ* ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಸಸ್ತಾನ, ಕಿಶೋರ್ ಕುಮಾರ್ ಶೆಟ್ಟಿ ಹೆಗ್ಗುಂಜಿ,  ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪದವೀಧರ ಕ್ಷೇತ್ರ ಚುನಾವಣೆಯ ಉಸ್ತುವಾರಿಯಾದ ಗೋಪಾಲ್ ಬಂಗೇರ, ಕೋಟ ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ, ಕೋಟ ಬ್ಲಾಕ್ ಕಾಂಗ್ರೆಸ್ ನ ಇಂಟೆಕ್ ಘಟಕದ ಅಧ್ಯಕ್ಷರಾದ ದೇವೇಂದ್ರ ಗಾಣಿಗ ಕೋಟ, ಬಾಲಕೃಷ್ಣ ಪೂಜಾರಿ ಸಸ್ತಾನ, ಉಡುಪಿ ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷರಾದ ನಾಗೇಂದ್ರ ಪುತ್ರನ್ ಕೋಟ, ಮೋಸಸ್ ರೋಡ್ರಿಗಸ್ ಐರೋಡಿ, ವೈ.ಬಿ ರಾಘವೇಂದ್ರ ಆಚಾರ್, ಆವರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ಚಿತ್ತರಂಜನ್ ಶೆಟ್ಟಿ ಆವರ್ಸೆ, ಶಿವರಾಮ್ ಶ್ರೀಯಾನ್, ಕೋಡಿ ಶಂಕರ್ ಬಂಗೇರ, ಸುಧಾಕರ್ ಪೂಜಾರಿ ಐರೋಡಿ, ಕುಮಾರ್ ಮಣ್ಣೂರು, ಶ್ರೀನಿವಾಸ್ ಶೆಟ್ಟಿಗಾರ್, ಚಂದ್ರ ಶೆಟ್ಟಿ ವಡ್ಡರ್ಸೆ, ಸೂರ್ಯಕಾಂತ್ ಶೆಟ್ಟಿ ಚಿತ್ರಪಾಡಿ, ಭಾಸ್ಕರ್ ಪೂಜಾರಿ ಉಪ್ಲಾಡಿ, ಕೋಡಿ ಸುಧಾಕರ್ ಪೂಜಾರಿ, ರತ್ನಾಕರ್ ಪೂಜಾರಿ ಪಾರಂಪಳ್ಳಿ, ಗಣೇಶ್ ಪೂಜಾರಿ ಕೋಟ, ಟಿ. ಮಂಜುನಾಥ್ ಕೋಟ, ರವೀಂದ್ರ ಐತಾಳ್ ಕೋಟ, ನಾರಾಯಣ ಮೇಸ್ತ್ರಿ ಕಾರ್ಕಡ, ಗಿರೀಶ್ ತೋಡ್ಕಟ್, ರಘು ಭಂಡಾರಿ ಕುಂಜಿಗುಡಿ, ಅಗ್ನಿಶ ಶೆಟ್ಟಿ ಬಿಲ್ಲಾಡಿ, ಮಂಜುನಾಥ ಕುಲಾಲ್ ಬಿಲ್ಲಾಡಿ,ಪ್ರಕಾಶ್ ಶೆಟ್ಟಿ ಪಡುಮುಂಡ್,  ಶಂಕರ್ ಪೂಜಾರಿ ಆವರ್ಸೆ, ದಿವಾಕರ್ ಗಾಣಿಗ ಆವರ್ಸೆ, ಚಂದ್ರ ಪೂಜಾರಿ ಆವರ್ಸೆ, ಆವರ್ಸೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಸಮ್ಮದ್, ಪಾಂಡೇಶ್ವರ ಪಂಚಾಯತ್ ಸದಸ್ಯರಾದ ಚಂದ್ರಮೋಹನ ಪೂಜಾರಿ, ಪ್ರವೀಣ್ ಗಡಿಯಾರ ಬಾರ್ಕುರ್, ಅಂತೋನಿ ಡಿಸೋಜ ಕೋಡಿ, ಅವಿನಾಶ್ ಪೂಜಾರಿ ಪಾಂಡೇಶ್ವರ, ವಾಸು ಕೋಟ್ಯಾನ್, ಲಕ್ಷ್ಮಣ್ ಶೆಟ್ಟಿ, ಶಂಸುದ್ದೀನ್  ಬಾರ್ಕುರ್,  ಸುರೇಶ್ ಕಚ್ಕೆರೆ, ಸದಾನಂದ ಗಿಳಿಯಾರು, ಗಣೇಶ್ ಗಾಣಿಗ, ಹನೆಹಳ್ಳಿ ಮಂಜುನಾಥ್ ಪೂಜಾರಿ, ಹನೆಹಳ್ಳಿ ಸಂತೋಷ್ ಪೂಜಾರಿ, ವಿಠ್ಠಲ್ ಪೂಜಾರಿ ಪಾಂಡೇಶ್ವರ, ಶ್ರೀಧರ್ ಆಚಾರ್ ಪಾಂಡೇಶ್ವರ, ದೇವರಾಜ್ ಆಚಾರ್ ಪಾಂಡೇಶ್ವರ, ಚಂದ್ರ ಶೆಟ್ಟಿ ಹಾಗೂ ಸ್ಥಳೀಯ ಪ್ರಮುಖ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ ಧನ್ಯವಾದಿಸಿದರು.

Right Click Disabled