ಕುಂದಾಪುರ : ಸಮಾಜದಲ್ಲಿ ದ್ವೇಷ ಭಾವನೆ ಹುಟ್ಟಿಸಿ, ಮಹಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರನ್ನು ಅವಹೇಳನ ಮಾಡಿದವರ ಮೇಲೆ FIR ದಾಖಲು

Spread the love

ಕುಂದಾಪುರದ ಮಹಾಂಕಾಳಿ ದೇವಸ್ಥಾನವು ಸರಿಸುಮಾರು ನೂರು ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಇದರ ಜೀರ್ಣೋದ್ಧಾರಕ್ಕೆ ಹಲವಾರು ಹಿರಿಯ ಖಾರ್ವಿ ಸಮುದಾಯದ ಮುಖಂಡರು ಶ್ರಮಿಸಿ ದೇವಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಇಂದು ಆ ಮಹಾತಾಯಿಯ ಶಕ್ತಿಯಿಂದ ಸಾಕಷ್ಟು ಈ ದೇವಾಲಯ ಅಭಿವೃದ್ಧಿ ಕಂಡಿದೆ.

ಆದರೆ ಕಳೆದ ನಾಲ್ಕೈದು ವರ್ಷಗಳಿಂದ ದೇವಾಲಯದ ಆಡಳಿತ ಮಂಡಳಿಯವರ ಬಗ್ಗೆ ಪದೇ ಪದೇ ಫೇಸ್ಬುಕ್ ವಾಟ್ಸಾಪ್ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ, ಪ್ರಚೋದನಕಾರಿ, ಹುರುಳಿಲ್ಲದ ಆಪಾದನೆಗಳನ್ನು ಮಾಡುತ್ತಾ ದೇವಸ್ಥಾನದ ಆಡಳಿತ ಮಂಡಳಿಗೂ, ಖಾರ್ವಿ ಸಮುದಾಯಕ್ಕೂ ಸಾಕಷ್ಟು ಕಿರುಕುಳವನ್ನು ಕೊಟ್ಟು ದೇವಸ್ಥಾನದ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಕೆಲವು ದುಷ್ಟ, ಬುದ್ಧಿಯ ಕಿಡಿಗೇಡಿಗಳು ಜೊತೆಯಾಗಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಮಾಜ ಬಾಂಧವರಿಗೆ ಅಪಕೀರ್ತಿ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ.

ಈ ಒಂದು ಕೆಲಸದಲ್ಲಿ ಗಣೇಶ್ ದಾಸ ಖಾರ್ವಿ, ಆನಂದ ಖಾರ್ವಿ ಮತ್ತು ಸತೀಶ್ ಖಾರ್ವಿ ಮತ್ತು ಇತರರು. ಈ ಮೂವರು ಸೇರಿಕೊಂಡು ಸಮಾಜದ ಗಣ್ಯರನ್ನು ತೇಜೋವದೆ ದುಷ್ಕತ್ಯಕ್ಕೆ ಮುಂದಾಗಿರುವುದು ವಿಷದನೀಯ. ಇವರೇ ಕಾಕಕ್ಕ ಗುಬ್ಬಕ್ಕನ ಕಥೆಗಳನ್ನು ಸೃಷ್ಟಿಸಿ ಮಾಡುವ ಖಾರ್ವಿ ಸಮಾಜ ಬಾಂಧವರಲ್ಲಿ ದೇವಸ್ಥಾನ ಮತ್ತು ಆಡಳಿತ ಮಂಡಳಿಯವರ ಮೇಲೆ ಕೆಟ್ಟ ಅಪಪ್ರಚಾರವನ್ನು ಮಾಡಿ, ದೇವಸ್ಥಾನದ ಅಭಿವೃದ್ಧಿಗೆ ಬರುತ್ತಿರುವ ದೇಣಿಗೆಯನ್ನು ಸಾಧ್ಯವಾದಷ್ಟು ತಡೆಹಿಡಿದು, ಅಲ್ಲದೆ ವೈಯಕ್ತಿಕ ವಿಚಾರಗಳನ್ನು ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಮಾಜದ ಗಣ್ಯ ವ್ಯಕ್ತಿಗಳ ಮಾನಹರಣ ಮಾಡಿರುತ್ತಾರೆ.

ಈ ಹಿಂದೆಯೂ ಇವರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ಮೇಲೆ ಆರೋಪಗಳ ಸೂರಿ ಮಳೆ ಮಾಡಿ, ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿ, ಪದೇ ಪದೇ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿ , ಕುಂದಾಪುರದ ಖಾರ್ವಿಕೇರಿಯ ಜನತೆಯ ಬಗ್ಗೆ ಪೊಲೀಸ್ ಠಾಣೆಯವರೇ ಬೇಸರ ಪಡುವಂತೆ ಮಾಡಿದ್ದಾರೆ. ಅಲ್ಲದೆ ಹಿಂದೆ ಇದ್ದ ತಹಸಿಲ್ದಾರಾದ ಕಿರಣ್ ಗೋರೆಯ್ಯರವರು ಆಡಳಿತ ಮಂಡಳಿ ಮತ್ತು ದೂರುದಾರರನ್ನು ಕರೆದು ಮಹಾಂಕಾಳಿ ದೇವಸ್ಥಾನದಲ್ಲಿ ಸೌವಾರ್ದತೆಯನ್ನು ಎತ್ತಿ ಹಿಡಿದು ಎಲ್ಲವನ್ನು ಸರಿಯಾಗಿ ಮಾಡಿದ್ದರು ಸಹ ಈ ಮೂರು ಜನ ಸೇರಿ ಸರಕಾರಿ ಅಧಿಕಾರಿಯ ಮೇಲೆ ಮಾನವ ಹಕ್ಕಿನಲ್ಲಿ ದೂರನ್ನು ಸಲ್ಲಿಸಿದ್ದಾರೆ. ಅದರ ನಂತರ ಇವರ ಉಪಟಳ ನಿಲ್ಲಲಿಲ್ಲ ನ್ಯಾಯಾಲಯದಲ್ಲಿ ಕೇಸ್ ಇದ್ದರೂ ಸಹ ಪದೇಪದೇ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯಬಿಟ್ಟು ದೇವಸ್ಥಾನದ ಆಡಳಿತ ಮಂಡಳಿ ಮತ್ತು ದೇವಸ್ಥಾನದ ಮೇಲೆ ಸಾರ್ವಜನಿಕರಲ್ಲಿ ಕೀಳರಿಮೆ ಬರುವಂತೆ ಈ ಮೂವರು ನೇರವಾಗಿ ಕಾರಣರಾಗಿತ್ತಾರೆ.

ಇವರಿಂದಾಗಿ ದೇವಸ್ಥಾನಕ್ಕೆ ಅಪಾರ ಪ್ರಮಾಣದ ದೇಣಿಗೆ ಬರುವುದು ನಿಂತಿದೆ. ಅಲ್ಲದೆ ಸಮಾಜ ಬಾಂಧವರಲ್ಲಿ ಒಡಕು ಮೂಡಿಸಿ ಭಿನ್ನಾಭಿಪ್ರಾಯ ಬರುವಂತೆ ಮಾಡುವುದರಲ್ಲಿ ಒಂದು ಹಂತದಲ್ಲಿ ಇವರು ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ದಿನದಿಂದ ದಿನಕ್ಕೆ ಇವರ ಉಪಟಳ ಜಾಸ್ತಿ ಆದ್ದರಿಂದ ಖಾರ್ವಿ ಸಮುದಾಯವೇ ಎಲ್ಲರೆದುರು ತಲೆತಗ್ಗಿಸುವಂತೆ ಇವರು ಮಾಡಿದ್ದಾರೆ. ಅಲ್ಲದೆ ಇವರು ನಾವು ಇದನ್ನೆಲ್ಲ ನಿಲ್ಲಿಸಬೇಕಾದರೆ ನಮ್ಮ ಜೊತೆ ಸೆಟಲ್ಮೆಂಟ್ ಮಾಡಿಕೊಳ್ಳಿ ಎಂದು ಹೇಳಿರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇವರುಗಳು ಹಿಂದೆ ಇದ್ದ ಸಬ್ ಇನ್ಸ್ಪೆಕ್ಟರ್ ಸದಾಶಿವ್ ಗೌರವರೂಜಿ ಅವರ ಬಗ್ಗೆಯೂ ತೀರ ಲಘುವಾಗಿ ಸಾರ್ವಜನಿಕ ವಲಯದಲ್ಲಿ ಮಾತನಾಡಿದರು. ಈಗಿನ ತಹಸಿಲ್ದಾರ್ ಶೋಭಾ ಲಕ್ಷ್ಮಿಯವರ ದೇವಸ್ಥಾನಕ್ಕೆ ಬಂದ ಫೋಟೋವನ್ನು ಉಪಯೋಗಿಸಿ ಬೇಕಾಬಿಟ್ಟಿ ಅವರಿಗೆ ಅಘೌರವ ತೋರಿ ಗಣೇಶ್ ದಾಸ ಖಾರ್ವಿ, ಆನಂದ ಖಾರ್ವಿ ಮತ್ತು ಸತೀಶ್ ಖಾರ್ವಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಯಬಿಟ್ಟು ವೈರಲ್ ಮಾಡಿ ಸರಕಾರಿ ಅಧಿಕಾರಿ ಒಬ್ಬರ ಮಾನಹರಣ ಮಾಡಿದ್ದಾರೆ. ಇವರ ಈ ಮಿತಿಮೀರಿದ ಅಟ್ಟಹಾಸದಿಂದ ಕಾರ್ವಿ ಸಮಾಜ ತಲೆತಗ್ಗಿಸುವ ಪರಿಸ್ಥಿತಿಗೆ ಇವರು ಕೊಂಡು ಹೋಗಿದ್ದಾರೆ.

ನಿನ್ನೆಯ ದಿನ ಗಣೇಶ್ ಖಾರ್ವಿ ತನ್ನ ಫೇಸ್ ಬುಕ್ ವಾಲ್ ನಲ್ಲಿ ಅಮ್ಮ ರವಿ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧ್ಯಕ್ಷರ ಬಗ್ಗೆ ಮತ್ತೊಮ್ಮೆ ಬೇಕಾಬಿಟ್ಟಿ ಬರೆದು ಮಾನಹಾನಿ ಮಾಡಿ. ವಿದ್ಯಾರಂಗ ಮಿತ್ರ ಮಂಡಳಿಯ ಕಾರ್ಯಕ್ರಮಕ್ಕೆ ಅಮ್ಮ ರವಿ ಬಂದರೆ ಅವರ ಕೈಕಾಲನ್ನು ಕಡಿದು ಹಾಕುತ್ತೇವೆ ಎಂದು ಸತೀಶ್ ಖಾರ್ವಿ ಹೇಳಿದ್ದಾರೆ ಎಂದು ಕುಂದಾಪುರದ ಜನತೆ ಹೇಳುತ್ತಿದೆ. ಅಲ್ಲದೆ ಗಣೇಶ್ ಖಾರ್ವಿ ಮತ್ತು ಸತೀಶ್ ಖಾರ್ವಿ ಅಮ್ಮರವಿ ಅವರಿಗೆ ಫೋನ್ ಕರೆ ಮಾಡಿ ಧ ಮ್ಕಿ ಹಾಕಿದ್ದಾರೆ. ಸತೀಶ್ ಖಾರ್ವಿ ಪತ್ರಿಕಾಗೋಷ್ಠಿ ನಡೆಸಿ ಅಮ್ಮ ರವಿ ಅವರ ಬಗ್ಗೆ ಸಾಕಷ್ಟು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಕಾರಣ ಈಗಾಗಲೇ ಬ್ರಹ್ಮವಾರ ಠಾಣೆಯಲ್ಲಿ ಇವರ ವಿರುದ್ಧ ದಾಖಲಾಗಿದೆ. ಅಲ್ಲದೇ ಅವರು ವಿದ್ಯಾರಂಗ ಮಿತ್ರ ಮಂಡಳಿ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ಕೃತ್ಯವನ್ನು ಎಸಗಿದ್ದಾರೆ.

ಖಾರ್ವಿ ಸಮುದಾಯದ ಗಣ್ಯರು ಮತ್ತು ಮಹಂಕಾಳಿ ದೇವಸ್ಥಾನದ ಆಡಳಿತ ಮಂಡಳಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಗಣೇಶ್ ಖಾರ್ವಿ ಆನಂದ ಖಾರ್ವಿ, ಸತೀಶ್ ಖಾರ್ವಿಯವರ ಈ ದುಷ್ಕೃತ್ಯವನ್ನು ಮಾಡದಂತೆ ವಿದ್ಯಾರಂಗ ಮಿತ್ರ ಮಂಡಳಿಯ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಕುಂದಾಪುರ ಠಾಣಾಧಿಕಾರಿಗಳು ಮುತುವರ್ಜಿ ವಹಿಸಿ ಯಾವುದೇ ಮತೀಯ ಗಲಬೆ, ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಸಮಾಜದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆ , ಪ್ರಚೋದನೆ ನೀಡುವ ಈ ಮೂವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಸಮಾಜದಲ್ಲಿ ದ್ವೇಷ ಭಾವನೆ ಹುಟ್ಟಿಸಿ ಸಾರ್ವಜನಿಕ ಸಾಮರಸ್ಯವನ್ನು ಕದಾಡುವ, ಪರಸ್ಪರ ಸೌಹಾರ್ದತೆಯನ್ನು ಕದಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಧಾರ್ಮಿಕ ಮನೋಭಾವನೆಗೆ ಧಕ್ಕೆ ಮಾಡಿ ಅವಹೇಳನ ಮಾಡುವ ಈ ಮೂವರ ವಿರುದ್ಧ ಗುಂಡ ಹಾಳೆಯನ್ನು ತೆರೆದು, ಗುಂಡಾ ಆಕ್ಟ್ ನಲ್ಲಿ ಗಡಿಪಾರು ಮಾಡಬೇಕಾಗಿ ವಿನಂತಿಸಿದ್ದಾರೆ.

Right Click Disabled