ಬೈಂದೂರು : ಗುಜ್ಜಾಡಿ 2023 24ನೇ ಸಾಲಿನ ಮಕ್ಕಳ ಗ್ರಾಮ ಸಭೆ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸಂಬಂಧಿಸಿದ 2023 -24 ನೇ ಸಾಲಿನ ಮಕ್ಕಳ ಗ್ರಾಮ ಸಭೆ ಗುಜ್ಜಾಡಿ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ತಲ್ಲೂರು ಭೀಮ ಸಂಸ್ಥೆಯ ಪ್ರಾಯೋಗತ್ವದಲ್ಲಿ ಗುಜ್ಜಾಡಿ ನಾಯಕವಾಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರುಗಿತು.
ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ವಹಿಸಿದ್ದರು.
ಮಕ್ಕಳ ಗ್ರಾಮಸಭೆ ತಲ್ಲೂರು ಭೀಮ ಸಂಸ್ಥೆಯ ಅನಿತಾ ರವರು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು
ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಶಾಲೆಯ ಸುತ್ತಮುತ್ತ ಇಸ್ಪೀಟ್ ಅಡ್ಡೆ ಹಾಗೂ ಶಾಲೆಯ ಪರಿಸರದಲ್ಲಿ ಅಸಭ್ಯವಾಗಿ ಅಲೆದಾಡುವವರಿಗೆ , ಶಾಲೆ ಯ ಪರಿಸರದಲ್ಲಿ ಮದ್ಯಪಾನ ಹಾಗೂ ಇತರ ಕೆಟ್ಟ ಪರಿಣಾಮ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹೇಳಿದರು,
ಮಕ್ಕಳ ಸಭೆಯಲ್ಲಿ ವಿದ್ಯಾರ್ಥಿಗಳು ಮಂಕಿ ಶಾಲೆ ಸಂಪರ್ಕಿಸುವ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ನಿಂತುಕೊಂಡು ಮಕ್ಕಳಿಗೆ ಭಯ ಹುಟ್ಟಿಸುವುದು, ಬೀದಿ ನಾಯಿಗಳ ಹಾವಳಿ, ಶಾಲೆಯ ಅಕ್ಕ ಪಕ್ಕ ದಲ್ಲಿ ತೆರೆದ ಬಾವಿಗೆ ತಡೆಗೂಡೆ ನಿರ್ಮಿಸುವುದು , ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ಶೌಚಾಲಯ, ಗ್ರಂಥಾಲಯ ಹಾಗೂ ವಿವಿಧ ಬೇಡಿಕೆ ಹಾಗೂ ಶಾಲೆಗೆ ಹೆಚ್ಚಿನ ಶಿಕ್ಷಕರ ಕೊರತೆ ಇದೆ ಎಂದು ಹೇಳಿದರು, ನಂತರ ಮಕ್ಕಳ ಸಭೆಯಲ್ಲಿ ಬಂದಂತ ಎಲ್ಲಾ ಹವಲುಗಳನ್ನು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷರಾದ ತಮ್ಮಯ್ಯ ದೇವಾಡಿಗ ಭರವಸೆ ನೀಡಿದ್ದರು,
ಗುಜ್ಜಾಡಿ ಗ್ರಾಮ ಪಂಚಾಯತ್ ವತಿಯಿಂದ ಸಭೆಗೆ ಆಗಮಿಸಿದಂತಹ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆ ಮಾಡಿದರು,
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗರತ್ನ ಖಾರ್ವಿ ಹಾಗೂ ಪಂಚಾಯತ್ ಸದಸ್ಯರು, ಆರೋಗ್ಯ ಇಲಾಖೆ, ಗಂಗೊಳ್ಳಿ ಪೊಲೀಸ್ ರಾಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಶಿಶು ಕಲ್ಯಾಣಿ ಇಲಾಖೆ, ಗುಜ್ಜಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಕ್ಕಳ ಪೋಷಕರು, ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಊರಿನ ಸಾರ್ವಜನಿಕರು, ಉಪಸ್ಥಿತರಿದ್ದರು
ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಮಾಧವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು