ಸುಳ್ಳಿಗೆ ಬೆಂಬಲವಾಗಿ ನಿಲ್ಲುವ ಸಂಘಟನೆ ನ್ಯಾಯದ ಘೋರಿ ಕಟ್ಟಲು ಹೊರಟಿದ್ದೀರಾ?

Spread the love

ಉಡುಪಿ: ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯುರ್ವೇದ ವೈದ್ಯರುಗಳ ಸಂಘಟನೆ ಎಂಬ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ತನ್ನ ವೈದ್ಯಕೀಯ ವೃತ್ತಿಗೆ ಪತ್ರಕರ್ತ ಓರ್ವನಿಂದ ತೊಂದರೆಯಾಗುತ್ತಿದೆ ಎಂದು ಹೇಳಿ ತುಳುನಾಡ ರಕ್ಷಣಾ ವೇದಿಕೆ ಎಂಬ ಸಂಘಟನೆಗೆ ದೂರು ಸಲ್ಲಿಸಿದ್ದಾರೆ ಆಯುರ್ವೇದ ವೈದ್ಯರುಗಳೆಂಬ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಆಯುರ್ವೇದ ವೈದ್ಯರ ಪರವಾಗಿ ಉಡುಪಿ ಜಿಲ್ಲಾ ಎಸ್.ಪಿಯವರಿಗೆ ಮನವಿ ನೀಡಿದ್ದಾರೆ ಎಂದು ಅದೇ ಸಂಘಟನೆಯ ಹೆಸರನ್ನು ಹೋಲುವ ವೆಬ್ ಸೈಟ್ ನಲ್ಲಿ ವರದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ,

ಅಸಲಿಗೆ ಆಯುರ್ವೇದ ವೈದ್ಯರುಗಳು ಎನ್ನುವರಿಗೆ ಅನ್ಯಾಯ ಆಗಿದೆ, ಬೆದರಿಕೆ ಇದೆ ಎಂದಾದರೆ ಕಾನೂನಿನ ಸಾಮಾನ್ಯ ಅರಿವು ಇದ್ದವರು ಕೂಡ ನೇರವಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ, ದೂರನ್ನು ಸಲ್ಲಿಸುತ್ತಾರೆ. ಈ ಪ್ರಕರಣದಲ್ಲಿ ಆಯುರ್ವೇದ ವೈದ್ಯರು ಎಂದು ಹೇಳುವವರು ಕನಿಷ್ಠ ಪೊಲೀಸರಿಗೆ ದೂರು ನೀಡದೆ ಸಂಘಟನೆ ಒಂದಕ್ಕೆ ದೂರು ನೀಡಿರುವುದು ವಿಪರ್ಯಾಸ ಅಲ್ಲದೆ , ಅಹಿತಕರ ಬೆಳವಣಿಗೆ ಆಗಿದೆ.

ಈ ಆಯುರ್ವೇದ ವೈದ್ಯರುಗಳು ತಮ್ಮ ಸಂಘಟನೆಯ ಮೂಲಕ ತುಳುನಾಡ ರಕ್ಷಣಾ ವೇದಿಕೆಗೆ ದೂರು ನೀಡಿ ಓರ್ವ ನಿಷ್ಠಾವಂತ ಪತ್ರಕರ್ತನಿಗೆ ಬೆದರಿಸುವ ತಂತ್ರವೇ? ಯಾವುದೇ ಸಂಘಟನೆಗಳು ಯಾವುದೇ ಘಟನೆಗಳ ಬಗ್ಗೆ ದೂರನ್ನು ಸಲ್ಲಿಸುವಾಗ ಆ ವಿಚಾರದ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡುವುದು ಸೂಕ್ತ ಅದನ್ನು ಬಿಟ್ಟು ಯಾರೋ ತಮಗೆ ಆಗದವರ ಮೇಲೆ ನೀಡಿದ ದ್ವೇಷ ಪೂರಿತ ದೂರನ್ನು ಯಥಾವತ್ ಹಿಂದುಮುಂದು ನೋಡದೆ ಮನವಿ ಸಲ್ಲಿಸುವುದು ಸಂಘಟನೆಯ ಅಪಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಪತ್ರಕರ್ತ ಕಿರಣ್ ಪೂಜಾರಿಯವರು ಹಳ್ಳಿಗಾಡಿನಾ ಬಡ ಮುಗ್ದ ರೋಗಿಗಳಿಗೆ ಆಗುತ್ತಿರುವ ಅನ್ಯಾಯದ ಪರ ರಾತ್ರಿ ಹಗಲೆನ್ನದೆ ತನಿಖಾ ಪತ್ರಕರ್ತಿಕ್ಕೆ ನಡೆಸಿ ಪ್ರಕಟಿಸಿದ ವರದಿಯಿಂದ ರೊಚ್ಚಿಗೆದ್ದ, ಅಕ್ರಮವಾಗಿ ವ್ಯವಹಾರ ನಡೆಸುತ್ತಿರುವ ವೈದ್ಯರುಗಳು ಪತ್ರಕರ್ತ ಕಿರಣ ಪೂಜಾರಿಯ ಮಾನಹಾನಿ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುವುದರಲ್ಲದೆ ಅವರನ್ನು ನಿರ್ನಾಮ ಮಾಡುವವರೆಗೆ ಎಲ್ಲಾ ಪ್ರಯತ್ನವನ್ನು ಈಗಾಗಲೇ ಮಾಡಿದ್ದಾರೆ.

ಆಯುಷ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಯ ತಾಲೂಕು ಅಧ್ಯಕ್ಷ ಡಾ ಹರಿಪ್ರಸಾದ್ ಶೆಟ್ಟಿ ಎಂದು ತಿಳಿದು ಬಂದಿದೆ. ಆದರೆ ತುಳುನಾಡ ರಕ್ಷಣಾ ವೇದಿಕೆಗೆ ಮನವಿ ನೀಡಿದ ಲೆಟರ್ ಹೆಡ್ ರಾಜ್ಯಕ್ಕೆ ಸಂಬಂಧಿಸಿದ್ದು, ತಾಲೂಕು ಅಧ್ಯಕ್ಷ ರವೀಂದ್ರ ಗೊಲ್ಲ ಎನ್ನುವ ವ್ಯಕ್ತಿಯದಾಗಿರುತ್ತದೆ, ಇದು ಸಹ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮನವಿ ನೀಡಿದ

ಆಯುರ್ವೇದ ವೈದ್ಯರಾಗಿ ಅಲೋಪತಿ ಚಿಕಿತ್ಸೆಯನ್ನು ನೀಡಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿರುವ ವೈದ್ಯರುಗಳು ಬಡ ಪತ್ರಕರ್ತ ಕಿರಣ್ ಪೂಜಾರಿಯವರನ್ನು ಹಣಿಯಲು ಪೊಲೀಸ್ ದೂರಿನಿಂದ ಮೊದಲು ಬಂದು ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ವಿಫಲರಾಗಿದ್ದು, ಇದೀಗ ಸಂಘಟನೆ ಒಂದರ ಬೆಂಬಲವೆಂಬ ಹೊಸ ನಾಟಕದೊಂದಿಗೆ ನಿಷ್ಠಾವಂತ ಪತ್ರಕರ್ತನನ್ನು ಹಣಿಯಲು ವೇದಿಕೆಯನ್ನು ನಿರ್ಮಿಸಿದ್ದಾರೆ.

ಆಯುರ್ವೇದ ವೈದ್ಯರುಗಳು ನಡೆಸುವ ಚಿಕಿತ್ಸೆ, ಅವರು ನಡೆಸುವ ವ್ಯವಹಾರಗಳು ನ್ಯಾಯಯುತವಾಗಿದ್ದರೆ ಅವರು ಭಯಪಡುವ ಅಗತ್ಯ ಏನಿದೆ? ಕಿರಣ್ ಪೂಜಾರಿಯಂತ 100 ಪತ್ರಕರ್ತರು ಬಂದರು ಹೆದರುವ ಅಗತ್ಯ ಇದೆಯೇ? ತಾವು ನಡೆಸುವ ಅಕ್ರಮ ವ್ಯವಹಾರವನ್ನು ಯಾರು ಪ್ರಶ್ನಿಸಬಾರದು ತಾವು ವೈದ್ಯರು ಎಂಬ ದುರಂಕಾರದಿಂದ ಓರ್ವ ಪತ್ರಕರ್ತ ಕಿರಣ್ ಪೂಜಾರಿ ಅವರನ್ನು ಮಣಿಸಲು ಯತ್ನಿಸಿದರೆ ಅವರಂತ ನೂರು ಪತ್ರಕರ್ತರು ಇಂಥ ಅಕ್ರಮ ವ್ಯವಹಾರ ನಡೆಸುವಂತಹ ವೈದ್ಯರುಗಳ ಜಾತಕ ಬಯಲು ಮಾಡಲು ಸಜ್ಜಾಗುವುದರಲ್ಲಿ ಸಂಶಯವಿಲ್ಲ.

ಪತ್ರಕರ್ತರು ಭಯವನ್ನು ಜಯಿಸಿದ ಮೇಲೆಯೇ ಇಂತಹ ತನಿಖಾ ಪತ್ರಿಕೋದ್ಯಮಕ್ಕೆ ಇಳಿದಿರುತ್ತಾರೆ ಅಂತಹ ಭಯವನ್ನು ಜಯಸಿ ಬಂದಿರುವ ಕಿರಣ್ ಪೂಜಾರಿಯಂತಹ ಪತ್ರಕರ್ತರನ್ನು ಯಾವುದೇ ಸಂಘಟನೆಗಳಿಂದ ಭಯಭೀತಿಗೊಳ್ಳಿಸುವ ಪ್ರಯತ್ನದಿಂದ ಏನು ಪ್ರಯೋಜನವಾಗದು ,
ಬಡವರ ಮುಗ್ದ ರೋಗಿಗಳ ಪರವಾಗಿ ನಿಂತಿರುವ ಕಿರಣ್ ಪೂಜಾರಿಯಂತವರ ನ್ಯಾಯಯುತ ಹೋರಾಟ ನಿರಂತರವಾಗಿ ಇರಬೇಕು. ಈ ಹೋರಾಟಕ್ಕೆ ನ್ಯಾಯವನ್ನು ಬಯಸುವ ಪ್ರತಿ ಒಬ್ಬ ಸಾಮಾಜಿಕ ಕಳಕಳಿ ಇರುವ ಸಾರ್ವಜನಿಕರು ಬೆಂಬಲ ಸಹಕಾರ ನಿಷ್ಠಾವಂತ ಪತ್ರಕರ್ತ ಕಿರಣ್ ಪೂಜಾರಿ ಅವರಿಗೆ ಬೇಕು.

Right Click Disabled