ಬೈಂದೂರು : ಕುಂದಾಪುರ ದೇವಗಿರಿ ಮರದ ಕೊಂಬೆ ಬಿದ್ದು ತಪ್ಪಿದ ಬಾರಿ ದೊಡ್ಡ ಅನಾಹುತ

Spread the love

ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ನ್ಯಾಯಾಲಯದ ಎದುರುಗಡೆ ಬೃಹತ್ ಗಾತ್ರದ ದೇವಗಿರಿ ಮರದ ಒಣಗಿದಕೊಂಬೆ ನೆಲಕ್ಕೆ ಉರುಳಿದ ಪರಿಣಾಮ ನ್ಯಾಯಾಲಯದ ಎದುರುಗಡೆ ಪಾರ್ಕಿಂಗ್ ಮಾಡಿದ ಕಾರು, ಬೈಕ್ ಮಧ್ಯ ಭಾಗದಲ್ಲಿ ಕೂದಲ ಅಳೆಯ ಅಂತರದಲ್ಲಿ ವಾಹನಗಳು ಅದೃಷ್ಟವಶ ಯಾವುದೇ ಹಾನಿಯಾಗದೆ ಪಾರಾಗಿದೆ.

ಕುಂದಾಪುರ ಪೇಟೆ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ತಾಲೂಕು ಕಚೇರಿ , ನ್ಯಾಯಾಲಯ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಇತ್ಯಾದಿ ಸರಕಾರಿ ಇಲಾಖೆಗಳಿಗೆ ಬಹಳಷ್ಟು ಜನರು ಓಡಾಡುವುದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕುಂದಾಪುರ ಪೇಟೆಯ ಭಾಗದಲ್ಲಿ ಮರದಲ್ಲಿ ಒಣಗಿದ ಕೊಂಬೆಗಳನ್ನು ತಕ್ಷಣ ತೆರೆವು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ,

Right Click Disabled