ಸೌಜನ್ಯ ಕೊಲೆ ಕೇಸಿನ ಪುನರ್ ತನಿಖೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಶ್ರೀರಾಮಸೇನೆ
11 ವರ್ಷದ ಹಿಂದೆ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕೇಸ್ ನಡೆದು 11 ವರ್ಷಗಳಾದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಸಾಕಷ್ಟು ಹೋರಾಟಗಳು, ಪ್ರತಿಭಟನೆಗಳು, ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮೌನವಾಗಿರುವುದನ್ನು ಶ್ರೀರಾಮಸೇನೆಯು ಖಂಡಿಸಿದೆ
ರಾಜ್ಯ ಸರ್ಕಾರ CBI ಗೆ ಮರುತನಿಖೆಗೆ ಒಪ್ಪಿಸಬೇಕು ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಮರುತನಿಖೆ ನಡೆಸಬೇಕು, ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಸರ್ಕಾರಿ ವೈದ್ಯರು, ಪೊಲೀಸ್ ತನಿಖಾಧಿಕಾರಿ ಹಾಗೂ ಸಂಬಂಧ ಪಟ್ಟ ಕರ್ತವ್ಯಲೋಪ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ ವಿಚಾರಣೆಯಾಗಬೇಕು,
ಸೌಜನ್ಯಳ ಕುಟುಂಬಕ್ಕೆ ಹಾಗೂ ಮಾಡದ ಅಪರಾಧಕ್ಕೆ 6 ವರ್ಷ ಜೈಲು ಶಿಕ್ಷೆ ಅನುಭವಿಸಿ ನಿರಪರಾಧಿ ಆದ ಸಂತೋಷ ರಾವ್ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು,
ಸೌಜನ್ಯ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಶ್ರೀರಾಮಸೇನೆಯು ಸರಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ನೀಡಿದ ಮಾನವಿಯಲ್ಲಿ ಅಗ್ರಹಿಸಿದೆ.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾ ಮುಖಂಡರಾದ ಶರತ್ ಮಣಿಪಾಲ, ಸುಜಿತ್ ನಿಟ್ಟೂರು, ಸುದೀಪ್ ಪೂಜಾರಿ, ಕೀರ್ತಿರಾಜ್ ಕಿದಿಯೂರು, ಪ್ರಕಾಶ್ ಹೆಗ್ಡೆ, ಸಂತೋಷ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.