ಬೈಂದೂರು: ಅಕ್ರಮ ಮರಳು ಅಡ್ಡೆಗೆ ರಾತ್ರೋರಾತ್ರಿ ಗಂಗೊಳ್ಳಿ ಪೊಲೀಸ್ ದಾಳಿ- 5 ಮಂದಿ ವಶ
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ, ಮೋವಾಡಿ,ಸೌಪರ್ಣಿಕ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನೆಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್..ನಾಯಕ್ ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಬಿಸಿ ಮುಟ್ಟಿಸಿದ್ದಾರೆ, ಅದರಲ್ಲೂ ಕೆಲವೊಂದು ಸ್ಥಳದಲ್ಲಿ ಕಾಣದ ಪ್ರಭಾವಿ ಕೈಗಳ ಬೆಂಬಲಿಗರು ತಮ್ಮ ಚಾಳಿಯನ್ನು ಬಿಡದೆ ತಮ್ಮ ಪ್ರಭಾವ ಬೀರಿ ಹಗಲು ವೇಳೆ ಬಿಟ್ಟು ರಾತ್ರಿಯ ಸಮಯದಲ್ಲಿ ಇಂತಹ ಅಕ್ರಮ ದಂದೆ ಶುರು ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯಕ್ ನಿನ್ನೆ ರಾತ್ರೋರಾತ್ರಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಿದರು.
ತ್ರಾಸಿ, ಮೋವಾಡಿ, ಸೌಪರ್ಣಿಕ ನದಿಯಲ್ಲಿ ದೋಣಿಯ ಮೂಲಕ ತೆರಳಿ ಅಕ್ರಮ ಮರಳು ದಂಧೆ ಮಾಡುತ್ತಿರುವ ಆಲ್ಟನ್ ತ್ರಾಸಿ ಆನಗೋಡು ಮತ್ತು ಉತ್ತರ ಪ್ರದೇಶ ರಾಜ್ಯದ ನಾಲ್ಕು ಮಂದಿ ಯನ್ನು ವಶಕ್ಕೆ ಪಡೆದು, ಅಕ್ರಮ ದಂದೆಗೆ ಬಳಸಿದ ಎರಡು ದೋಣಿ, ಹಾಗೂ ಅಕ್ರಮ ಮರಳು ದಂಧೆಗೆ ಬಳಸಿದ ಸಲಕರಣೆಗಳನ್ನು ಮುಟ್ಟು ಕೋಲು ಹಾಕಿ ಕೇಸು ದಾಖಲಿಸಿ ಹೆಡೆಮುರಿ ಕಟ್ಟಿದ್ದಾರೆ,
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯಕ್ ಕಾಕಿ ಬಟ್ಟೆಯ ಕದರಿನ ಖಡಕ್ ಅಧಿಕಾರಿ ಠಾಣೆಗೆ ಬಂದ ಮೇಲೆ ಅಕ್ರಮವಾಗಿ ನಡೆಯುತ್ತಿರುವ ಮಟ್ಕಾ ದಂದೆ, ಕೋಳಿ ಅಂಕ, ಇಸ್ಪೀಟ್ ಜುಗಾರಿ, ಇತ್ಯಾದಿ ಎಲ್ಲಾ ದಂಧೆಗಳು ಬಂದ್ ಮಾಡಿದ್ದಾರೆ,
ರಾತ್ರೋರಾತ್ರಿ ಕಾರ್ಯಚರಣೆ ವೇಳೆ ಜೀಪು ಚಾಲಕ ದಿನೇಶ್ ಬೈಂದೂರು, ರಾಘವೇಂದ್ರ ಪಿ, ಯೋಗೀಶ ಪುತ್ರನ್, ಚಂದ್ರಣ್ಣ, ಶರಣಪ್ಪ, ಕಾರ್ಯಚರಣೆಯಲ್ಲಿ ಹಾಜರಿದ್ದರು.