ಆಕಾಶ್ ಬೈಜೂಸ್ ಹಂಥೆ 14 ನೇ ಆವೃತ್ತಿ ಅನಾವರಣ

Spread the love

ಮಂಗಳೂರು : ಆಕಾಶ್ ಬೈಜೂಸ್ ವ್ಯಾಪಕವಾಗಿ ಬೇಡಿಕೆಯಿರುವ ಹಂಥೆ (ಆಕಾಶ್ ರಾಷ್ಟ್ರೀಯ ಟ್ಯಾಲೆಂಟ್ ಹಂಟ್ ಪರೀಕ್ಷೆ) 14 ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಪ್ರಮುಖ ವಾರ್ಷಿಕ ವಿದ್ಯಾರ್ಥಿವೇತನ ಪರೀಕ್ಷೆಯು VII-XII ತರಗತಿಯ ವಿದ್ಯಾರ್ಥಿಗಳಿಗೆ 100% ವರೆಗಿನ ವಿದ್ಯಾರ್ಥಿ ವೇತನಗಳು ಮತ್ತು ಗಮನಾರ್ಹ ನಗದು ಪ್ರಶಸ್ತಿಗಳೊಂದಿಗೆ ತಮ್ಮ ಸಾಮರ್ಥ್ಯ ಬಹಿರಂಗಪಡಿಸುವ ಅವಕಾಶ ಒದಗಿಸುತ್ತದೆ. ಜೊತೆಗೆ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ನಲ್ಲಿ ಭರವಸೆಯ ಭವಿಷ್ಯದ ಕನಸುಗಳತ್ತ ಯುವ ಮನಸ್ಸುಗಳನ್ನು ಮೇಲಕ್ಕೆತ್ತಲು ಸಬಲೀಕರಣಗೊಳಿಸುವುದು, ಹಂಥೆ 2023 ಯಶಸ್ಸಿನ ಎನ್ಟಿಎಸ್ಇ ಅಸಾಧಾರಣ ಹೆಬ್ಬಾಗಿಲು ಎಂದು ಭರವಸೆ ನೀಡುತ್ತದೆ.
ಹಂಥೆ ಸ್ಕಾಲರ್ ಶಿಫ್ ಸ್ವೀಕರಿಸುವವರು ನೀಟ್ , ಎಇಇ, ರಾಜ್ಯದ ಸಿಇಟಿಗಳು, ಶಾಲೆ/ಬೋರ್ಡ್ ಪರೀಕ್ಷೆಗಳು ಮತ್ತು ಎನ್ಟಿಎಸ್ಇ ಮತ್ತು ಒಲಂಪಿಯಾಡಗಳಂತಹ ಸ್ಪರ್ಧಾತ್ಮಕ ವಿದ್ಯಾರ್ಥಿ ವೇತನಗಳು ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ತಯಾರಾಗಲು ಆಕಾಶನಲ್ಲಿ ನೋಂದಾಯಿಸಿಕೊಳ್ಳಬಹುದು. ತಜ್ಞರ ಮಾರ್ಗದರ್ಶನ ಪಡೆಯಬಹುದು.
ವಿವಿಧ ತರಗತಿಗಳ 100 ವಿದ್ಯಾರ್ಥಿಗಳಿಗೆ 5-ದಿನಗಳ ಎಲ್ಲಾ ವೆಚ್ಚಗಳನ್ನು ಪಾವತಿಸುವ ರಾಷ್ಟ್ರೀಯ ವಿಜ್ಞಾನ ದಂಡಯಾತ್ರೆಯ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ನೀಡಿದೆ. ವರ್ಷಗಳಲ್ಲಿ ಹಂಥೆ ಗಮನಾರ್ಹ ಸಾಧಕರನ್ನು ನಿರ್ಮಿಸಿದೆ.
ಆಕಾಶ್ ಬೈಜೂಸನ ಹಲವಾರು ವಿದ್ಯಾರ್ಥಿಗಳು ನೀಟ್(ಯುಜಿ) ಮತ್ತು ಎಇಇ (ಅಡ್ವಾನ್ಸ್ಡ್) ನಂತಹ ಪರೀಕ್ಷೆಗಳಲ್ಲಿ ಉನ್ನತ ಶ್ರೇಯಾಂಕಿತರಾಗಿ ಹೊರಹೊಮ್ಮಿದ್ದಾರೆ. ಕೌಸ್ತವ್ಬಾರಿ (ಏರ್ 3), ಧ್ರುವ್ಅಡ್ವಾಣಿ (ಏರ್ 5), ಮತ್ತು ಸೂರ್ಯ ಸಿದ್ಧಾರ್ಥ್ ಓ (ಏರ್ 6) ಸೇರಿದಂತೆ ಹಂಥೆ ಯೊಂದಿಗೆ ಆಕಾಶ್ ಬೈಜೂಸ್ ನಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಿದ ಹಲವಾರು ವಿದ್ಯಾರ್ಥಿಗಳು ನೀಟ್ (UG) 2023 ರಲ್ಲಿಚಾಂಪಿಯನ್ ಆದರು. ಹಾಗೆಯೇ, ಆದಿತ್ಯ ನೀರಜೆ (ಏರ್ 27) ಮತ್ತು ಆಕಾಶ್ ಗುಪ್ತಾ (ಏರ್ 28) ಅವರು ಹಂಥೆ ಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಎಇಇ (Advanced) 2023 ರಲ್ಲಿಶ್ಲಾಘನೀಯ ಸ್ಥಾನಗಳನ್ನು ಗಳಿಸಿದರು.
ಆಕಾಶ್ಎಜುಕೇಷನಲ್ ಸರ್ವಿಸ್ ಲಿಮಿಟೆಡ್ (AESL) ನ ಸಿಇಒ ಅಭಿಷೇಕ ಮಹೇಶ್ವರಿ, ಕನಸುಗಳು ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ಕಡಿಮೆಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಹಂಥೆ ವೇಗವರ್ಧಕವಾಗಿದೆ. ಸ್ವಂತ ವೇಗದಲ್ಲಿ ನೀಟ್ ಮತ್ತು ಐಐಟಿ -ಎಇಇ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಂಥೆ ಬಾಗಿಲು ತೆರೆಯುತ್ತದೆ.
ನಾವು ಹಂಥೆ 2023 ರಲ್ಲಿ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತೇವೆ ಎಂದರು. ಹಂಥೆ 2023 ಅ. 7-15;2023 ರಿಂದ ಭಾರತದಲ್ಲಿ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆನ್ಲೈಬ್ ಮತ್ತು ಅಫ್ ಲೈನ್ಗಳಲ್ಲಿ ನಡೆಯುತ್ತದೆ.
ಹಂಥೆ ಆನ್ಲೈನ್ ಎಲ್ಲಾ ಪರೀಕ್ಷೆಯ ದಿನಗಳಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 9ರ ನಡುವೆ ನಡೆಯಲಿದೆ, ಆದರೆ ಆಫ್ ಲೈನ್ ಪರೀಕ್ಷೆಗಳನ್ನು ಅ.8 ಮತ್ತು 15, 2023 ರಂದು ಎರಡು ಪಾಳಿಗಳಲ್ಲಿ ನಡೆಸಲಾಗುವುದು. ಬೆಳಿಗ್ಗೆ 10.30ರಿಂದ- 11:30 ರವರೆಗೆ ಮತ್ತು ಸಂಜೆ 4ರಿಂದ-5ರವರೆಗೆ ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು.
ಹಂಥೆ ಒಟ್ಟು 90 ಅಂಕಗಳನ್ನು ಹೊಂದಿರುವ ಒಂದು ಗಂಟೆಯ ಪರೀಕ್ಷೆಯಾಗಿದ್ದು, ವಿದ್ಯಾರ್ಥಿಗಳ ಗ್ರೇಡ್ ಮತ್ತು ಸ್ಟ್ರೀಮ್ ಆಕಾಂಕ್ಷೆಗಳ ಆಧಾರದ ಮೇಲೆ 40 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ತರಗತಿ VII-IX ವಿದ್ಯಾರ್ಥಿಗಳಿಗೆ, ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮರ್ಥ್ಯದಂತಹ ವಿಷಯಗಳನ್ನು ಒಳಗೊಂಡಿರುತ್ತವೆ. ವೈದ್ಯಕೀಯ ಶಿಕ್ಷಣಕ್ಕಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ, ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಒಳಗೊಂಡಿರುತ್ತವೆ, ಅದೇ ತರಗತಿಯ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ,
ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಒಳಗೊಂಡಿರುತ್ತವೆ. ಅದೇರೀತಿ, ನೀಟ್ ಗುರಿ ಹೊಂದಿರುವ XI-XII ತರಗತಿಯ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರವನ್ನು ಒಳಗೊಂಡಿವೆ. ಇಂಜಿನಿಯರಿಂಗ್ ಆಕಾಂಕ್ಷಿಗಳು ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತವನ್ನು ಒಳಗೊಂಡಿದೆ.
ಆನ್ ಲೈನ್ ಪರೀಕ್ಷೆ ಪ್ರಾರಂಭವಾಗುವ ಮೂರು ದಿನಗಳ ಮೊದಲು ಮತ್ತು ಆಪ್ ಲೈನ್ ಪರೀಕ್ಷೆಗೆ ಏಳುದಿನಗಳ ಮೊದಲು ಹಂಥೆ 2023 ಗಾಗಿ ದಾಖಲಾತಿ ಫಾರ್ಮ್ ಅನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಪರೀಕ್ಷಾಶುಲ್ಕವು ಆಫ್ ಲೈನ್ಗೆ ರೂ 100 ಮತ್ತು ಆನ್ ಲೈನ್ಗೆ ಉಚಿತವಾಗಿದೆ. ಹಂಥೆ 2023 ಫಲಿತಾಂಶಗಳನ್ನು ಅ 27, 2023 ರಂದು, X ತರಗತಿಯ ವಿದ್ಯಾರ್ಥಿಗಳಿಗೆ, ನ 03, 2023 ರಂದು, VII ರಿಂದ IX ತರಗತಿಗಳಿಗೆ ಮತ್ತು ನ.08,2023 ರಂದು XI ಮತ್ತು XII ತರಗತಿಯ ವಿದ್ಯಾರ್ಥಿಗಳಿಗೆ ಪ್ರಕಟಿಸಲಾಗುವುದು. ಫಲಿತಾಂಶಗಳು ನಮ್ಮವೆಬ್ಸೈಟ್ನಲ್ಲಿ ಲಭ್ಯವಿದೆ.

Right Click Disabled