ಸೌಜನ್ಯ ಹೋರಾಟ ಸಮಿತಿ ಉಡುಪಿಸೌಜನ್ಯಳ ನ್ಯಾಯಕ್ಕಾಗಿ ಬ್ರಹತ್ ಪ್ರತಿಭಟನಾ ಸಭೆ.

ಧರ್ಮಸ್ಥಳ ನಿವಾಸಿ ಸೌಜನ್ಯ ಎನ್ನುವ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಕೃತ್ಯ ನಡೆದು 11 ವರ್ಷ ಸಂದರೂ ಇದರ ಹಿಂದಿನ ನೈಜ ಅತ್ಯಾಚಾರಿಗಳನ್ನು ಕಂಡು ಹಿಡಿಯಲು ಇದುವರೆಗೂ ನಮ್ಮ ಕಾನೂನು ವ್ಯವಸ್ಥೆಗೆ ಸಾಧ್ಯವಾಗಲಿಲ್ಲ.
ಹಾಗಾಗಿ ಮತ್ತೊಮ್ಮೆ ಈ ಪ್ರಕರಣದ ಬಗ್ಗೆ ನ್ಯಾಯಾಂಗ ಮರು ತನಿಖೆ ಮಾಡಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮೆಲ್ಲರ ಒಕ್ಕೊರಲ ಕೂಗು ಆಗಿದೆ. ತುಳುನಾಡಿನ ಜವಾಬ್ದಾರಿಯುತ ನಾಗರೀಕರಾದ ನಮ್ಮಿಂದ ಈ ಪ್ರಕರಣಕ್ಕೆ ನ್ಯಾಯ ಇಲ್ಲಿಯ ತನಕ ದೊರಕಿಸಿಕೊಡುವುದು ಸಾಧ್ಯವಾಗದಿದ್ದರೂ,11 ವರ್ಷಗಳ ನಂತರ ಈಗಲಾದರೂ ಸೌಜನ್ಯ ಎನ್ನುವ ಮನೆಮಗಳ ನ್ಯಾಯಕ್ಕಾಗಿ ಹೋರಾಟದಲ್ಲಿ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯ.
ಈ ಪ್ರಯುಕ್ತ ದಿನಾಂಕ 29.08.2023 ರ ಮಂಗಳವಾರ ಉಡುಪಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ. ಆ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಪಾದಯಾತ್ರೆ ಮೂಲಕ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕ ಬಳಿ ಬ್ರಹತ್ ಪ್ರತಿಭಟನಾ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ ಹಾಗೂ ಸೌಜನ್ಯ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ಎಂದು ಉಡುಪಿ ಜಿಲ್ಲಾ ಸೌಜನ್ಯ ಹೋರಾಟ ಸಮಿತಿಯ ಪ್ರಕಟಣೆಯು ತಿಳಿಸಿರುತ್ತದೆ.