ನಿಟ್ಟೂರು ಬಬ್ಬುಸ್ವಾಮಿ ಸೇವಾ ಸಮಿತಿಯಿಂದ ಶ್ರಮದಾನ.

ಸ್ವಾತಂತ್ರೋತ್ಸವದ ಅಂಗವಾಗಿ ನಿಟ್ಟೂರು ಬಬ್ಬುಸ್ವಾಮಿ ಸೇವಾ ಸಮಿತಿ ವತಿಯಿಂದ ಇಂದು ನಿಟ್ಟೂರು ಪರಿಸರದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಸಮಿತಿಯ ಎಲ್ಲಾ ಸದಸ್ಯರು ಇಂದು ಬೆಳಿಗ್ಗೆಯಿಂದ ಮದ್ಯಾಹ್ನವರೆಗೆ ಬಬ್ಬುಸ್ವಾಮಿ ದೈವಸ್ಥಾನ ವಠಾರ ಹಾಗೂ ರಸ್ತೆಯ ಬದಿಯಲ್ಲಿದ್ದ ಹುಲ್ಲು ಹಾಗೂ ಕಸಗಳನ್ನು ತೆಗೆದು ಸ್ವಚ್ಛ ಮಾಡಿ ವಿಶಿಷ್ಟವಾಗಿ ಸ್ವಾತಂತ್ರೋತ್ಸವವನ್ನು ಆಚರಿಸಿದರು.