ಶ್ರೀರಾಮಸೇನೆಯಿಂದ ಹೋರಾಟಕ್ಕೆ ನಿರ್ಧಾರ.
ಶ್ರೀರಾಮಸೇನೆಯಿಂದ ಹೋರಾಟಕ್ಕೆ ನಿರ್ಧಾರ.
ಉಡುಪಿಯ ಖಾಸಗಿ ಕಾಲೇಜ್ ನಲ್ಲಿ ವಿದ್ಯಾರ್ಥಿನಿಗಳ ಖಾಸಗಿ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳಿಗೆ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ಆಗಬೇಕು. ಹಾಗು ಇದಕ್ಕೆ ಕಾಲೇಜು ಆಡಳಿತ ಮಂಡಳಿ ತನ್ನದೇ ಮುತುವರ್ಜಿ ವಹಿಸಿ ತಪ್ಪಿತಸ್ತ ವಿದ್ಯಾರ್ಥಿನಿಯರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಮುಂದಿನ 7 ದಿನದ ಒಳಗೆ ಕಾಲೇಜು ಇದಕ್ಕೆ ಸ್ಪಂದಿಸದಿದ್ದಲ್ಲಿ ರಾಜ್ಯದಾದ್ಯoತ ಶ್ರೀರಾಮಸೇನೆ ವತಿಯಿಂದ ಹೋರಾಟವನ್ನು ಮಾಡಲಿದ್ದೇವೆ ಎಂದು ಶ್ರೀ ರಾಮ ಸೇನೆ ಉಡುಪಿ ಜಿಲ್ಲೆ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಹಿಂದೂ ಹೆಣ್ಮಕಳ್ಳನ್ನು ಗುರಿಯಾಗಿಸಿ ಕೊಂಡು ವ್ಯವಸ್ಥಿತ ಫಿತೂರಿ ನಡೆಯುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಈ ಹಿಂದೆಯೂ ಹಿಜಾಬ್ ವಿಷಯದಲ್ಲಿ ಅನ್ಯದರ್ಮಿಯ ವಿದ್ಯರ್ಥಿನಿಗಳು ಕೋಮು ದ್ವೇಷದ ಜ್ವಾಲೆಯನ್ನು ಬಿತ್ತಿ, ಉಡುಪಿ ಜಿಲ್ಲೆಗೇ ಅವಮಾನ ಮಾಡುವಂತೆ ಮಾಡಿರುವುದು ನಗ್ನ ಸತ್ಯ.
ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದು ಜಿಲ್ಲೆಯಲ್ಲಿ ಸೌಹಾರ್ದತೆ ಯನ್ನು ಕೆಡಿಸಲು ಮಾಡುವ ಹುನ್ನಾರ. ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದವರ ಮೇಲೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಶ್ರೀರಾಮಸೇನೆಯು ರಾಜ್ಯದಾಧ್ಯಂತ ಹೋರಾಟ ಮಾಡಲಿದೆ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಸರಕಾರವನ್ನು ಎಚ್ಚರಿಸಿದೆ.