ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ. ಜಯರಾಂ ಅಂಬೆಕಲ್ಲು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಮತಾಂತರ ನಿಷೇದ ಕಾಯ್ದೆಯನ್ನು ಜಾರಿ ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಕಾಯ್ದೆಯನ್ನು ವಾಪಾಸ್ ತೆಗೆದುಕೊಂಡಿರುವುದು ಸರಿಯಲ್ಲ. ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಹಿಂದುಗಳನ್ನು ಕಡೆಗಣಿಸುತ್ತಿದೆ. ಸರಕಾರದ ಇಂಥ ಹಠಮಾರಿತನವು ಹಿಂದುಗಳ ತಾಳ್ಮೆಯನ್ನು ಪ್ರಶ್ನಿಸುವಂತಿದೆ.
ಬಲವಂತ, ವಂಚನೆ, ಒತ್ತಾಯ, ಆಮಿಷ ಮೂಲಕ ನಡೆಯುವ ಮತ್ತು ಮದುವೆಯಾಗುವ ಭರವಸೆ ಮೂಲಕ ನಡೆಯುವ ಮತಾಂತರ ತಡೆಯಲು ಬಲವಂತ ಮತಾಂತರ ನಿಷೇದ ಕಾಯ್ದೆ ಜಾರಿಯಾಗಿತ್ತು.
ಸಾಮಾಜಿಕ ಪಿಡುಗು ಮತಾಂತರವನ್ನು ನಿಲ್ಲಿಸಬೇಕೇ ಹೊರತು, ಅದಕ್ಕೆ ಪ್ರಚೋದಿಸಬಾರದು.
ಮತಾಂತರಿಗಳಿಗೆ ರತ್ನ ಕಂಬಳಿ ಹಾಸಿ, ಹಿಂದೂ ಸಮಾಜವನ್ನು ಒಡೆದು ರಾಜ್ಯವನ್ನು ಇನ್ನೊಂದು ಪಾಕಿಸ್ತಾನ ಮಾಡಲು ರಾಜ್ಯ ಸರಕಾರ ಹೊರಟಿದೆ ಎಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ.