ಮದ್ಯಪಾನರಹಿತ ಯಕೃತ್ತಿನ ರೋಗಗಳ ಅಂಗವಾಗಿ ಉಚಿತ ಫೈಬ್ರೊ ಸ್ಕ್ಯಾನ್ ಮತ್ತು ಶಿಕ್ಷಣ ಕಾರ್ಯಕ್ರಮ
ಮಣಿಪಾಲ, 12ನೇ ಜೂನ್ 2023: ಪ್ರತಿ ವರ್ಷ ಜೂನ್ ತಿಂಗಳನ್ನು ಅಂತರಾಷ್ಟ್ರೀಯ ನಾನ್-ಆಲ್ಕೊಹಾಲಿಕ್ ಸ್ಟೀಟೋಹೆಪಟೈಟಿಸ್ (NASH) ಮಾಸವನ್ನಾಗಿ ಆಚರಿಸಲಾಗುತ್ತದೆ. ಇದು ಮದ್ಯಪಾನರಹಿತ ಸ್ಟೀಟೋಹೆಪಟೈಟಿಸ್, ಅಥವಾ ನ್ಯಾಶ್ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಸಮರ್ಪಿಸಲಾಗಿದೆ, ಮುಖ್ಯವಾಗಿ ಸಾರ್ವಜನಿಕರು, ಅಪಾಯದಲ್ಲಿರುವ ರೋಗಿಗಳು, ವೈದ್ಯಕೀಯ ಸಮುದಾಯ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ಮಾಧ್ಯಮಗಳ ಮೂಲಕ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಸಾರ್ವಜನಿಕರಿಗೆ ಉಚಿತ ಫೈಬ್ರೊ ಸ್ಕ್ಯಾನ್ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಉಚಿತ ಫೈಬ್ರೊ ಸ್ಕ್ಯಾನ್ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಉಪವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಶಿರನ್ ಶೆಟ್ಟಿ ಅವರು, ಮದ್ಯಪಾನರಹಿತ ಯಕೃತ್ತ ನ ಕಾಯಿಲೆಗೆ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಸ್ಥೂಲಕಾಯತೆ, ಮತ್ತು ಜಂಕ್ ಫುಡ್ ಇದರಲ್ಲಿ ಮುಖ್ಯವಾದುದು. ಇದು ಸುಲಭವಾಗಿ ತಡೆಗಟ್ಟಬಹುದಾದ ರೋಗವಾಗಿದೆ. ನ್ಯಾಶ್ ಜಾಗೃತಿ ಮಾಸದ ಅಂಗವಾಗಿ ನಾವು ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಶಂಕಿತ ರೋಗಿಗಳಿಗೆ ಉಚಿತವಾಗಿ ಫೈಬ್ರೊ ಸ್ಕ್ಯಾನ್‌ಗಳನ್ನು ನಡೆಸುತ್ತಿದ್ದೇವೆ ಎಂದರು.
ವೈದ್ಯಕೀಯ ಅಧೀಕ್ಷಕರು