ಇಂದಿರಾನಗರ ಸರಕಾರಿ ಶಾಲೆಗೆ ಉಚಿತ ಬ್ಯಾಗ್, ಕೊಡೆ, ಕಲಿಕಾ ಸಾಮಾಗ್ರಿ ವಿತರಣೆ ಜೆ.ಸಿ.ಐ ಹೆಬ್ರಿ ಇವರ ಸಹಯೋಗದೊಂದಿಗೆ ಇಂದು ಸ.ಕಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಕೊಡೆ

Spread the love

ಇಂದಿರಾನಗರ ಸರಕಾರಿ ಶಾಲೆಗೆ ಉಚಿತ ಬ್ಯಾಗ್, ಕೊಡೆ, ಕಲಿಕಾ ಸಾಮಾಗ್ರಿ ವಿತರಣೆ ಜೆ.ಸಿ.ಐ ಹೆಬ್ರಿ ಇವರ ಸಹಯೋಗದೊಂದಿಗೆ ಇಂದು ಸ.ಕಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಕೊಡೆ, ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ನೆರವೇರಿತು. ಜೇ.ಸಿ ನಿಕಟ ಪೂರ್ವ ಅಧ್ಯಕ್ಷರಾದ ಜೇ.ಸಿ ಹರೀಶ್ ಇವರು ಗ್ರಾಮೀಣ ಭಾಗದ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂತಸದ ಕಲಿಕೆಗೆ ಹಾಗೂ ಮಗುವಿನ ಗುಣಾತ್ಮಕ ಶಿಕ್ಷಣಕ್ಕೆ ಪೂರಕವಾಗಿದೆ ಎಂದು ಶುಭ ಹಾರೈಸಿ ವಿತರಿಸಿದರು.ಮುಖ್ಯ ಅಥಿತಿಯಾದ ಜೇ.ಸಿ ಪೂರ್ವಾಧ್ಯಕ್ಷ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ಸ್ಥಳೀಯ ಉದ್ಯಮಿಗಳು, ಗುತ್ತಿಗೆದಾರಾದ ಚಂದ್ರಶೇಖರ್ ಶೆಟ್ಟಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ಉಚಿತವಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ರಾಮಾಂಜನೇಯ,SDMC ಅಧ್ಯಕ್ಷರಾದ ಜ್ಯೋತಿ ಆಚಾರಿ ಸದಸ್ಯರಾದ ಸುರೇಶ್ ನಾಯ್ಕ ,ಭಾರತಿ ,ವಿಮಲಾ,ಗೌರವ ಶಿಕ್ಷಕಿ ಅನಿತಾ ಉಪಸ್ಥಿತರಿದ್ದರು. ಜೇ.ಸಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

Right Click Disabled