ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ತೆಕಟ್ಟೆ : ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಯನ್ನು ತೆಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಸರಳ, ಸುಂದರ ರೀತಿಯಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ದ.ಹಿ. ವೇ(ರಿ.) ಅಧ್ಯಕ್ಷರಾದ ಆಶಾ ಹೆಬ್ರಿಯವರು ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ಇಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 132ನೇ ಜನ್ಮದಿನ. ಇವರು 1891, ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್‌ನಲ್ಲಿ ಜನಿಸಿದರು. ಮಹಾರ ಜಾತಿಯಲ್ಲಿ ಜನಿಸಿದ ಇವರು, ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಭಾರತರತ್ನ ಡಾ. ಭೀಮರಾವ್ ಅಂಬೇಡ್ಕರ್ ಅವರು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎಂದು ಖ್ಯಾತಿ ಪಡೆದವರು. ಅವರು ವಿಶ್ವದರ್ಜೆಯ ವಕೀಲರು, ಸಾಮಾಜ ಸುಧಾರಕರೂ ಆಗಿದ್ದವರು. ಭಾರತದ ದಲಿತ ಚಳುವಳಿಗಳ ಹಿಂದಿನ ಶಕ್ತಿ ಎಂಬ ಹೆಗ್ಗಳಿಕೆಯೂ ಇವರದ್ದು, ನಿವೃತ್ತ ಶಿಕ್ಷಣಾಧಿಕಾರಿ ಶ್ರೀ ಬಾಸ್ಕರ್ ಶೆಟ್ಟಿಯವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದ ಮಹತ್ವ ಮತ್ತು ಅವರು ಬೆಳೆದು ಬಂದ ದಾರಿ, ಹೋರಾಟದ ಬಗ್ಗೆ ವಿಚಾರವನ್ನು ಇಂದಿನ ಪೀಳಿಗೆಗೆ ಮಾದರಿಯಾಗಬೇಕು, ಸ್ಪೂರ್ತಿ ಪಡೆದು ಶಿಕ್ಷಿತರಾಗಬೇಕು ಎಂದು ಈ ಹೊತ್ತಿನಲ್ಲಿ ಅವರ ಬಗೆಗಿನ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ದಲಿತ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆಯ ಅಧ್ಯಕ್ಷೆ ಆಶಾ ಹೆಬ್ರಿ, ಸತೀಶ್ ಕುಮಾರ್ ತೆಕಟ್ಟೆ, ಚಂದ್ರ ಕೊರ್ಗಿ, ಪ್ರಕಾಶ್ ಕೇದೂರು, ಕೃಷ್ಣ ಮಧುವನ, ಸತೀಶ್ ಶಂಕರನಾರಾಯಣ ಹಾಗೂ ದ.ಹಿ. ವೇ. (ರಿ.) ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.