ಪಾಕ ಪ್ರವೀಣ ರಾಮಾಮೂರ್ತಿಯವರಿಗೆ ಮುತಾಲಿಕ್ ರವರಿಂದ ಸನ್ಮಾನ

Spread the love

ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರು ಇಂದು ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ, ಉಡುಪಿಯ ಖ್ಯಾತ ಪಾಕಪ್ರವೀಣರಾದ ದೊಡ್ಡಣ್ಣಗುಡ್ಡೆಯ ಪಾಡಿಗಾರು ರಾಮಾಮೂರ್ತಿ ಭಟ್ ರವರನ್ನು ಅವರ ಸ್ವಗ್ರಹದಲ್ಲಿ ಸನ್ಮಾನಿಸಿದರು. ಪಾಕಶಾಸ್ತ್ರಜ್ಞ ಜೊತೆಗೆ ಕಳೆದ ನೂರು ವರ್ಷಗಳಿಂದಲೂ ಅಧಿಕ ಇತಿಹಾಸ ಹೊಂದಿರುವ ನಮ್ಮ ಪೂರ್ವಜರ ಪರಿಕರಗಳನ್ನು ಕಳೆದ 25 ವರ್ಷಗಳಿಂದ ಸಂಗ್ರಹಿಸುತ್ತಿರುವ, ಹಾಗೂ ನಮ್ಮ ಮುಂದಿನ ಜನಾoಗಕ್ಕೆ ಅದನ್ನು ಪರಿಚಯಿಸುತ್ತಿರುವ ರಾಮ್ ಮೂರ್ತಿ ಅವರ ಸಾಧನೆ ಹಾಗೂ ಕೆಲಸಗಳನ್ನು ಮುತಾಲಿಕ್ ರವರು ಕೊಂಡಾಡಿದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಂಬಿಕಾ ಪ್ರಭು, ರಾಧಾಕೃಷ್ಣ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಆನಂದ್ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಹಾಗೂ ಜಿಲ್ಲಾ ವಕ್ತಾರ ಶರತ್ ಕೆ, ವಿವಿಧ ಸಂಘಟನೆಗಳ ಮುಖಂಡರಾದ ಹರೀಶ್ಅಧಿಕಾರಿ, ಪ್ರವೀಣ್ ಪೂಜಾರಿ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Right Click Disabled