ವರ್ಗಾವಣೆಗೊಂಡ ವೃತ್ತನಿರೀಕ್ಷಕರಿಗೆ ಶ್ರೀರಾಮಸೇನೆಯಿಂದ ಬೀಳ್ಕೊಡುಗೆ

Spread the love

ಉಡುಪಿ: ಉಡುಪಿ ನಗರ ಠಾಣೆಯಿಂದ ವರ್ಗಾವಣೆಗೊಂಡ
ದಕ್ಷ, ಹಾಗೂ ಪ್ರಾಮಾಣಿಕ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ರವರನ್ನು ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಇಂದು ಅತ್ಯಂತ ಪ್ರೀತಿಪೂರ್ವಕವಾಗಿ ಗೌರವಿಸಲಾಯಿತು. ತದನಂತರ ಪ್ರತಿಕ್ರಿಯಿದ ಸಂಘಟನೆಯ ಪ್ರಮುಖರು, ವೃತ್ತ ನಿರೀಕ್ಷಕರು ಉಡುಪಿ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೇವಲ ಒಂದು ವರ್ಷ ಏಳು ತಿಂಗಳಾಯಿತು. ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಪ್ರಾಮಾಣಿಕ ಅಧಿಕಾರಿಯವರನ್ನು ರಾಜಕೀಯ ನಾಯಕರ ಆಶಯದಂತೆ ಸರಕಾರವು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಅತ್ಯಂತ ಖೇದಖರ ಇದು ಚುನಾಯಿತ ಪ್ರತಿನಿಧಿಗಳಿಗೆ ಶೋಭೆ ತರುವಂತದಲ್ಲ ಹಾಗೂ ಇಂತ ಜನಪ್ರತಿನಿದಿಗಳನ್ನು ಇನ್ನು ಮುಂದೆ ಜನರು ಆಯ್ಕೆ ಮಾಡಬಾರದು ಎಂದು ಉಡುಪಿ ಜಿಲ್ಲಾ ಶ್ರೀ ರಾಮಸೇನೆ ಖಾರವಾಗಿ ಪ್ರತಿಕ್ರಿಯಿಸಿದೆ.

Right Click Disabled