ಭಾನುವಾರ ಬೆಂಗಳೂರಿನಲ್ಲಿ ತೊಗಲು ಬೊಂಬೆಯಾಟ: ರಂಗಪುತ್ಥಳ ಯಶೋಧ ಪಪೆಟ್ರಿ ಮಹಿಳಾ ತಂಡದಿಂದ ಪೌರಾಣಿಕ ಕಥೆಗಳ ಕಲ್ಪನೆಯೊಂದಿಗೆ ಬೊಂಬೆಯಾಟಕ್ಕೆ ಹೊಸ ಸ್ಪರ್ಷ

Spread the love

ಬೆಂಗಳೂರು, ನ, 24; ನಶಿಸುತ್ತಿರುವ ತೊಗಲು ಬೊಂಬೆಯಾಟವನ್ನು ರಕ್ಷಿಸಿ ಬೆಳೆಸಲು ರಾಜ್ಯದ ಏಕೈಕ ಮಹಿಳಾ ತಂಡ ರಂಗಪುತ್ಥಳ ಯಶೋಧ ಪಪೆಟ್ರಿ ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಭಾನುವಾರ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾ ಭವನದಲ್ಲಿ ಗೊಂಬೆಯಾಟ ಆಯೋಜಿಸಲಾಗಿದೆ.

ತೊಗಲು ಗೊಂಬೆಯಾಟ ಕಲೆಯನ್ನು ಪೋಷಿಸಲು ಈ ಸಂಸ್ಥೆ ಮಹಿಳಾ ತಂಡ ಪೌರಾಣಿಕ ಕಥೆಗಳನ್ನು ನವೀನ ಕಲ್ಪನೆಗಳೊಂದಿಗೆ ಯುವ ಜನತೆಗೆ ಪರಿಚಯಿಸುವ ಪ್ರಯತ್ನದಲ್ಲಿ ನಿತರವಾಗಿದೆ. ರಂಗಪುತ್ಥಳಿ ಯಶೋದ ಪಪೆಟ್ರಿ ಸಂಸ್ಥೆಯ 13 ನೇ ವರ್ಷಾಚರಣೆ ಅಂಗವಾಗಿ ತೊಗಲು ಬೊಂಬೆಯಾಟ ಆಯೋಜಿಸಲಾಗಿದೆ.

ಪಾರಂಪರಿಕ ಗ್ರಾಮೀಣ ಕಲೆಯಾದ ತೊಗಲು ಗೊಂಬೆಯಾಟವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ.

ಇದೇ ಸಂದರ್ಭದಲ್ಲಿ ಡಾ. ರಾಧಾಕೃಷ್ಣ ಉರಾಳ ಅವರಿಂದ ಯಕ್ಷಗಾನ ಪ್ರಸ್ತುತಪಡಿಸಲಾಗುತ್ತಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸುತ್ತಿದ್ದು, ಹಾಸ್ಯ ಬರಹಗಾರ ನರಸಿಂಹಮೂರ್ತಿ, ಗೊಂಬೆಯಾಟ ಕಲಾವಿದ ಆರ ಕಟ್ಟಿ ಭಾಗವಹಿಸಿದ್ದಾರೆ. ಹಿರಿಯ ಚಿತ್ರನಟ ಶರಣ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಯಶೋಧ ಶಶಿಧರ್ ತಿಳಿಸಿದ್ದಾರೆ.

Right Click Disabled