ಯಲಹಂಕದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಆಚರಣೆ

Spread the love

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಶ್ವ ಕರ್ಮ ಸಮುದಾಯಕ್ಕೆ
ಕೌಶಲ್ಯಾಭಿವೃದ್ಧಿ ಕುರಿತು ಅರಿವು ಮೂಡಿಸಲು ಆದ್ಯತೆ: ಯಲಹಂಕದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಆಚರಣೆ

ಬೆಂಗಳೂರು; ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈ ಯೋಜನೆಯಡಿ ಇರುವ ಉಜ್ವಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ನವೆಂಬರ್ 6 ರಂದು ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಕರ್ಮ ಕಾಷ್ಠಶಿಲ್ಪ ಅಧ್ಯಕ್ಷ ಎಮ್.ಜಿ. ನಾಗೇಶ್ ಆಚಾರ್ಯ, ಮಾಜಿ ಆಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರದ ಕೆತ್ತನೆ ಹಾಗೂ ಆಧುನಿಕ ಯಂತ್ರಗಳೊಂದಿಗೆ ಈ ವೃತ್ತಿಯಲ್ಲಿರುವ ಉಜ್ವಲ ಭವಿಷ್ಯದ ಬಗ್ಗೆ ಅರಿವು ಮೂಡಿಸಿ, ವೃತ್ತಿಪರ ವಿಕಸನ ಶಿಬಿರಗಳನ್ನು ನಡೆಸಿ ತರಬೇತಿಯ ಮೂಲಕ ಗುಣಮಟ್ಟ ಮತ್ತು ಕಾರ್ಯಕ್ಷಮತೆಯಿಂದ ತಮ್ಮ ಉತ್ಪನ್ನಗಳನ್ನು ಉತ್ಪಾದಿಸುವಂತೆ ಉತ್ತೇಜಿಸಿ, ಯುವಕರನ್ನು ಈ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ವಿಶೇಷ ಒತ್ತು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು ಎಂದರು.

ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವದ ಪ್ರಯುಕ್ತ ವಿಕಾಸ ಸಂಭ್ರಮ-2022 ಸ್ಮರಣ ಸಂಚಿಕೆಯನ್ನು ಸಹ ಬಿಡುಗಡೆ ಮಾಡುತ್ತಿದ್ದು, ಕಾಷ್ಠಶಿಲ್ಪದಲ್ಲಿ ಸಾಧನೆ ಮಾಡಿದ ಶಿಲ್ಪಿಗಳಿಗೆ ಕಾಷ್ಠಶಿಲ್ಪ ರತ್ನ” ಬಿರುದಿನೊಂದಿಗೆ ಪರಮ ಪೂಜ್ಯ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಕರ್ನಾಟಕ ಸರಕಾರದ ಮಾನ್ಯ ಸಚಿವರು, ಸಮಾಜದ ಗಣ್ಯರ ಸಮ್ಮುಖದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಸ್ಮರಣ ಸಂಚಿಕೆ “ವಿಕಾಸ ಸಂಭ್ರಮ” ಬಿಡುಗಡೆ ಮಾಡಲಿದ್ದಾರೆ ಎಂದರು.

ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವತ್ ನಾರಾಯಣ್, ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಆರ್. ವಿಶ್ವನಾಥ್, ದೇವಾಲಯಗಳ ವಾಸ್ತುಶಿಲ್ಪ ತಜ್ಞರಾದ ಗುರೂಜಿ ಉಮೇಶ್ ಆಚಾರ್ಯ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ನರಸಿಂಹ ಆಚಾರ್, ಉಪಾಧ್ಯಕ್ಷ ಕೆ. ಉದಯ ಆಚಾರ್ಯ, ಕೋಶಾಧಿಕಾರಿ ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.

Right Click Disabled