ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ, ಚಿನ್ನ, ರೇಷ್ಮೆ ಸೀರೆ ಗೆಲ್ಲಿ.
ಬಾಲಗೋಪಾಲ ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನ – ನವೆಂಬರ್ 20 ರಂದು ಯಲಹಂಕದಲ್ಲಿ ಆಯೋಜನೆ.
ಬೆಂಗಳೂರು, ನ, 4; ಸ್ನೇಹಿತರ ಕೂಟ ಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ನವೆಂಬರ್ 20 ರಂದು ಯಲಹಂಕ ಓಲ್ಡ್ ಟೌನ್ ನ ಬಿಬಿಎಂಪಿ ಕಚೇರಿ ಮುಂಭಾಗ ರಂಗೋಲಿ, ಬಾಲಗೋಪಾಲ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು 21 ರಂದು ಸೋಮವಾರ ಲಕ್ಷ ದೀಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಬಿ.ಬಿ.ಎಂ.ಪಿ. ಮಾಜಿ ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್. ಅಶ್ವಥ್ ತಿಳಿಸಿದ್ದಾರೆ.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಒಂದು ಲಕ್ಷಾಂತರ ರೂಪಾಯಿ ಚಿನ್ನ, ನಗದು ಬಹುಮಾನ ಗೆಲ್ಲಲು ಅವಕಾಶ ಕಲ್ಪಿಸಲಾಗಿದೆ. ರಂಗೊಲಿ ಸ್ಪರ್ಧೆಯಲ್ಲಿ ಗೆಲ್ಲುವ ಎಲ್ಲರಿಗೂ ರೇಷ್ಮೆ ಸೀರೆ ಜೊತೆಗೆ ಮೊದಲ ಸ್ಥಾನ ಗಳಿಸುವವರಿಗೆ ಐದು ಗ್ರಾಂ, ಎರಡನೇ ಸ್ಥಾನಕ್ಕೆ 4, ಮೂರನೇ ಸ್ಥಾನಕ್ಕೆ 3, ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ 2 ಮತ್ತು 1 ಗ್ರಾಂ ಚಿನ್ನದ ನಾಣ್ಯ ನೀಡಲಾಗುವುದು. 6 ರಿಂದ 10 ನೇ ಸ್ಥಾನ ಗಳಿಸುವವರಿಗೆ ಬೆಳ್ಳಿ ವಸ್ತುಗಳು ಮತ್ತು ರೇಷ್ಮೆ ಸೀರಿ ವಿತರಣೆ ಮಾಡಲಾಗುವುದು ಎಂದರು.
ಬಾಲಗೋಪಾಲ ಸ್ಪರ್ಧೆಯಲ್ಲಿ ರೇಷ್ಮೇ ಸೀರೆ ಜೊತೆಗೆ ನಗದು ಬಹುಮಾನ ನೀಡಲಾಗುವುದು. 1ನೇ ಸ್ಥಾನಕ್ಕೆ 10ಸಾವಿರ ನಗದು, 2ನೇ 5ಸಾವಿರ, 3ನೇ ಬಹುಮಾನ 3 ಸಾವಿರ, 4 ಮತ್ತು 5ನೇ ಸ್ಥಾನಕ್ಕೆ 2 ಮತ್ತು 1 ಸಾವಿರ ರೂ ನಗದು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
10ನೇ ಮತ್ತು 12ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ಚಿನ್ನದ ಪದಕ ವಿಜೇತರಿಗೆ ಪುರಸಭೆ ಮತ್ತು ನಗರಸಭೆ ಮಾಜಿ ಅಧ್ಯಕ್ಷರುಗಳ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು. 21 ರಂದು ಸೋಮವಾರ ಲಕ್ಷ ದೀಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತರು ವಿ.ವಿ. ವಿನಾಯಕ ಅವರನ್ನು 9342181144 ಸಂಪರ್ಕಿಸಬಹುದು.