ಐದು ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ದೀಪಾವಳಿ ಪಟಾಕಿ ದುಷ್ಪರಿಣಾಮದ ಜಾಗೃತಿ ಅಭಿಯಾನ
ಬೆಂಗಳೂರು: ಬೆಂಗಳೂರು ಅಣುವ್ರತ ಸಮಿತಿ ಹಾಗು ಅಣುವ್ರತ ವಿಶ್ವ ಭಾರತಿ ಸೊಸೈಟಿಯಿಂದ ಬೆಂಗಳೂರು ನಗರದ 26 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುರಕ್ಷಿತ ದೀಪಾವಳಿ ಹಬ್ಬ ಆಚರಣೆ ಹಾಗು ಪರಿಸರ ಪ್ರೇಮಿ ಪಟಾಕಿಗಳನ್ನು ಸುಡುವ ಕ್ರಮದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪಟಾಕಿಯಿಂದ ಆಗುವ ದುಷ್ಪರಿಣಾಮ, ವಾಯು ಮಾಲಿನ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. “ಶಾಲಾ ಮಕ್ಕಳು ಹೊಗೆ ಪಟಾಕಿಗಳನ್ನು ಸುಡುವುದಿಲ್ಲ- ದೀಪಗಳನ್ನು ಹಚ್ಚುತ್ತೇವೆ” ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಅಣುವ್ರತ ಸಮಿತಿ ಪ್ರಚಾರ ಮತ್ತು ಪ್ರಸಾರ ಕಾರ್ಯದರ್ಶಿ ಬಿ.ವಿ ಚಂದ್ರಶೇಖರಯ್ಯ ಮತ್ತು ಅಣುವ್ರತ ಕ್ರಿಯೇಟಿವಿಟಿ ಸ್ಪರ್ಧೆಯ ರಾಷ್ಟ್ರೀಯ ಸಂಚಾಲಕ ರಾಜೇಶ್ ಚಾವತ್, ಮಹೇಂದ್ರ ತೇಬ. ರೂಪ್ ಚಂದ್ ದೇಸರಾಲ ಉಪಸ್ಥಿತರಿದ್ದರು.