ಲಲಿತ್ ಅಶೋಕ್ ನಲ್ಲಿ ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ

Spread the love

ಬೆಂಗಳೂರು: ಭಾರತದ ಅತ್ಯುತ್ತಮ ವಿನ್ಯಾಸದ ವಸ್ತ್ರಾಭರಣಗಳ ಪ್ರದರ್ಶನ ಹೈ ಲೈಫ್ ನಿಂದ ದಿ ಲಲಿತ್ ಅಶೋಕ್ ನಲ್ಲಿ ಆಯೋಜಿಸಲಾಗಿದ್ದು ಅಕ್ಟೋಬರ್ 6 ರಿಂದ 8 ರ ವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಪ್ರದರ್ಶನ
ಇದಾಗಿದ್ದು, ವಧುವಿನ ಉಡುಗೆ, ವಿನ್ಯಾಸದ ಉಡುಪುಗಳು ಆಭರಣಗಳು, ಫ್ಯಾಶನ್ ಪರಿಕರಗಳು, ಕಲಾಕೃತಿಗಳು ಮತ್ತು ಅಲಂಕಾರಕ ಆಭರಣಗಳ ಪ್ರದರ್ಶನ ಇದಾಗಿದೆ.



ಭಾರತದಾದ್ಯಂತ ಅತ್ಯುತ್ತಮ ಬ್ರಾಂಡ್ ಗಳು ಮತ್ತು ವಿನ್ಯಾಸದ ವಸ್ತ್ರಾಭರಣಗಳ ಮಾರಾಟ ಮೇಳ ಇದಾಗಿದ್ದು, ನವ ನವೀನ ವಸ್ತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆ ವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೈ ಲೈಫ್ ಎಕ್ಸಿಬಿಷನ್ ನ ವ್ಯವಸ್ಥಾಪಕ ನಿರ್ದೇಶಕ ಪಿ. ಡೊಮಿನಿಕ್ ತಿಳಿಸಿದ್ದಾರೆ.



ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಚಿನ್ನಾಭರಣಗಳು ಕರಕುಶಲ ವಸ್ತುಗಳು ಹೀಗೆ ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ ದೊರೆಯಲಿವೆ. ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ.

Right Click Disabled