ಬ್ರಹತ್ ಪ್ರತಿಭಟನೆ: ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ವಿರುದ್ಧ ಆಕ್ರೋಶ

Spread the love

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನ್ಯಾಯಯುತ ಪರಿಹಾರ ನೀಡುವಂತೆ ಆಗ್ರಹಿಸಿ 439 ಎನ್.ಜಿ.ಇ.ಎಫ್ ನೌಕರರಿಂದ ಖನಿಜ ಭವನದ ಎದುರು ಭೃಹತ್ ಪ್ರತಿಭಟನೆ: ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ವಿರುದ್ಧ ಆಕ್ರೋಶ

ಬೆಂಗಳೂರು, ಸೆ, 22; ಎನ್.ಜಿ.ಇ.ಎಫ್ ಸಿಬ್ಬಂದಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘಿಸಿ, ಭೂ ಮಾಫೀಯಾ ಜೊತೆ ಕೈಜೋಡಿಸಿ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವ ಎನ್.ಜಿ.ಇ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಗುಂಜನ್ ಕೃಷ್ಣ ಅವರ ವಿರುದ್ಧ ನಗರದ ಖನಿಜ ಭವನದ ಮುಂದೆ 439 ಉದ್ಯೋಗಿಗಳು ಭಾರೀ ಪ್ರತಿಭಟನೆ ನಡೆಸಿದರು.

ಬಹುತೇಕ ಮಂದಿ ಹಿರಿಯ ನಾಗರಿಕರಾಗಿದ್ದು, ತಾವು ದುಡಿದ ಸಂಸ್ಥೆಯಿಂದ ತಮಗೆ ದೊರೆಯಬೇಕಾಗಿದ್ದ ನ್ಯಾಯಯುತ ಪರಿಹಾರಕ್ಕಾಗಿ ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ ಎಂದು ಆರೋಪಿಸಿದರು.

ಉಚ್ಛ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 439 ನೌಕರರಿಗೆ ನ್ಯಾಯುತವಾಗಿ ಬರಬೇಕಾಗಿರುವ ಬಾಕಿ ಹಣ ನೀಡದೇ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಅವರು ಭೂ ಮಾಫೀಯ ಜೊತೆ ಕೈಜೋಡಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಮಿಕರ ಹಣದ ದುರುಪಯೋಗ ಮತ್ತು ದುಂದುವೆಚ್ಚ ಮಾಡುತಿದ್ದಾರೆ. ಅತ್ಯಂತ ಭ್ರಷ್ಟ ಅಧ್ಯಕ್ಷ ಮತ್ತು ಅಧಿಕಾರಿಯಾಗಿರುವ ಇವರು ನೌಕರರ ವಿಚಾರದಲ್ಲಿ ಅಮಾನವೀಯಗಾಗಿ ವರ್ತಿಸುತ್ತಿದ್ದಾರೆ ಎಂದು ಅವರ ಧೋರಣೆ ಖಂಡಿಸಿ ಖನಿಜ ಭವನದ ಎನ್.ಜಿ.ಇ.ಎಫ್, ಆಡಳಿತ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 20 ವರ್ಷಗಳ ಕಾರ್ಮಿಕರ ಹೋರಾಟಕ್ಕೆ ಎಲ್ಲಾ ನ್ಯಾಯಾಲಯಗಳು ಮನ್ನಣೆ ನೀಡಿವೆ. ಬಾಕಿ ಹಣ ನೀಡುವಂತೆ ಹೊಸದಾಗಿ ರಚನೆಯಾಗುವ ಆಡಳಿತ ವರ್ಗಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ನೌಕರರ ಪಟ್ಟಿ ನೀಡಿ ಪರಿಹಾರಕ್ಕಾಗಿ ನೌಕರರು ಮಾಡಿದ ಮನವಿಗಳು ವ್ಯರ್ಥ ಕಸರತ್ತಿನಂತಾಗಿವೆ. ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಆದೇಶಕ್ಕೆ ಈ ಅಧಿಕಾರಿ ಕ್ಯಾರೇ ಎನ್ನುತ್ತಿಲ್ಲ. ಭೂ-ಮಾಫೀಯಾ ಜೊತೆ ಶಾಮೀಲಾಗಿ ಕಾರ್ಮಿಕರ ಹಣವನ್ನು ಐಷಾರಾಮಿಯಾಗಿ ವೆಚ್ಚ ಮಾಡುತ್ತಿದ್ದಾರೆ. ಇವರ ಜೊತೆ ಅಧಿಕಾರಿಗಳಾದ ಅರುಣಿ ಮತ್ತು ನಾಗರಾಜ್ (ಮಾಫೀಯಾ ಏಜೆಂಟ್) ಮತ್ತು ಕೆಲವು ನಿರ್ದೇಶಕರು ದುಷ್ಟ ಕೂಟ ರಚಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು

ಅಧಿಕಾರ ದುರುಪಯೋಗ ಮಾಡಿಕೊಂಡು ಕಾರ್ಮಿಕರ ಬೆವರು ಸುರಿಸಿ ಕಟ್ಟಿದ ಕಾರ್ಖಾನೆಯ ಆಸ್ತಿಯನ್ನು ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿ “ಪಬ್ಲಿಕ್ ಚಾರಿಟಲ್ ಟ್ರಸ್ಟ್ ರಚಿಸಿದ್ದಾರೆ. ಕಾರ್ಮಿಕರ ದುಡಿಮೆಯ ಹಣವನ್ನು ಜರ್ಮನ್ ಕಂಪನಿಯ ಷೇರುದಾರರಿಗೆ ಹಣ ಹಂಚಿ, ಈ ನೆಲದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಹಲವು ಕಾರ್ಮಿಕರು ಮರಣ ಹೊಂದಿದ್ದು, ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ನಮಗೆ ದೊರೆಯಬೇಕಾದ ನ್ಯಾಯಯುತ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

Right Click Disabled